ಜೆಸಿಐ ಕೊಕ್ಕಡ ಕಪಿಲಾ ಘಟಕದ 2026ನೇ ಸಾಲಿನ ಹೊಸ ಅಧ್ಯಕ್ಷ–ಕಾರ್ಯದರ್ಶಿ ಆಯ್ಕೆ

ಶೇರ್ ಮಾಡಿ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ 2026ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶಿಬರಾಜೆ ಪಾದೆ ಗ್ರಾಮಾಭ್ಯುದಯ ಅನುಷ್ಠಾನ ಸಮಿತಿಯ ಕಚೇರಿಯಲ್ಲಿ ಡಾ. ಶೋಭಾ ಪಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ರಿತೇಶ್ ಎಂ. ಸ್ಟ್ರೆಲ್ಲಾ ಅವರನ್ನು ಘಟಕದ 2026ನೇ ಸಾಲಿನ ಹೊಸ ಅಧ್ಯಕ್ಷರಾಗಿ ಹಾಗೂ ಜೋಯೆಲ್ ಪಿರೇರಾ ಅವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಒಡ್ರಲ್ಕೆ ಮೂಲದ ರಿತೇಶ್ ಎಂ.ಸ್ಟ್ರೆಲ್ಲಾ ಸಮಾಜ ಸೇವಾ ಕ್ಷೇತ್ರದಲ್ಲಿ ಪದವೀಧರರಾಗಿದ್ದು, ವಿವಿಧ ಸಂಘ–ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಯುವ ನಾಯಕ. ಪ್ರಸ್ತುತ ಪ್ರಗತಿಪರ ಕೃಷಿಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜೋಯೆಲ್ ಪಿರೇರಾ ಅವರು ಕೊಕ್ಕಡ ಮರಿಯಾಕೃಪಾ ನಿವಾಸಿ. ಸಿವಿಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

ಸಭೆಯಲ್ಲಿ ನಾಮಿನೇಶನ್ ಕಮಿಟಿಯ ಮುಖ್ಯಸ್ಥ ಹಾಗೂ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಜೈನ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಘಟಕದ ಕಾರ್ಯದರ್ಶಿ, ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

  •  

Leave a Reply

error: Content is protected !!