

ಕಡಬ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕಡಬ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಅಂಗವಾಗಿ ಕಡಬ ಶ್ರೀ ದುರ್ಗಾಂಬಿಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಡಬ ತಾಲೂಕಿನ ಇಚ್ಲಂಪಾಡಿ ಮತ್ತು ನೂಜಿಬಾಳ್ತಿಲ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಹಣ್ಣು ಹಂಪಲು ನೀಡಿ ಪೂಜ್ಯ ಖಾವಂದರ ಹುಟ್ಟ ಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ ಸವಣೂರು, ಕಡಬ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಇಂದುಶೇಖರ ಶೆಟ್ಟಿ, ಪತ್ರಕರ್ತ ಬಾಲಕೃಷ್ಣ ಕೊಯಿಲ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯೆ ಸರೋಜಿನಿ ಆಚಾರ್ಯ, ಒಕ್ಕೂಟದ ಪದಾಧಿಕಾರಿಗಳಾದ ಹೇಮಾಲತ, ರಮೇಶ್ ಅಡೀಲು, ಶೌರ್ಯ ವಿಪತ್ತು ತಂಡದ ಧನಂಜಯ, ಕೃಷಿ ಅಧಿಕಾರಿ ಸೋಮೇಶ್, ವಲಯ ಮೇಲ್ಪಿಚಾರಕರಾದ ರವಿಪ್ರಸಾದ್ ಆಲಾಜೆ, ವಿಜೇಶ್ ಜೈನ್, ಆನಂದ ಡಿ ಬಿ, ವೀಣಾ ಕೆ, ಜಯಶ್ರೀ, ಸುಜಾತ, ಮೊದಲಾದವರು ಉಪಸ್ಥಿತರಿದರು.






