


ನೆಲ್ಯಾಡಿ:ಜೆಸಿಐ ಭಾರತ ಕೊಡಮಾಡುವ ಪ್ರತಿಷ್ಠಿತ 100% ಕ್ಷಮತೆ ಪ್ರಶಸ್ತಿಗೆ ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಭಾಜನರಾಗಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಜೆಸಿಐ ವಲಯ 15ರ 8ಮಂದಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಅದರಲ್ಲಿ ಡಾ.ಸುಧಾಕರ್ ಶೆಟ್ಟಿಯವರು ಕೂಡ ಓರ್ವರು. ಡಿ.27ರಿಂದ 29ರವರೆಗೆ ಚೆನ್ನೈನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ರಾಷ್ಟ್ರೀಯ ಅಧ್ಯಕ್ಷರಾದ ಅಂಕೂರು ಜಂಜೂನ್‌ವಾಲಾ ಅವರಿಂದ ಸ್ವೀಕರಿಸಿದರು. ಪ್ರಸ್ತುತ ಡಾ.ಸುಧಾಕರ ಶೆಟ್ಟಿಯವರು ಜೆಸಿಐ ವಲಯ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.





