ಅರಸಿನಮಕ್ಕಿ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶೀರೂರು ಶ್ರೀ ವೇದವರ್ಧನ ಸ್ವಾಮೀಜಿ ಭೇಟಿ – ಪೂರ್ಣ ಕುಂಭ ಸ್ವಾಗತ, ಆಶೀರ್ವಚನ

ಶೇರ್ ಮಾಡಿ

ಕೊಕ್ಕಡ : ಪರ್ಯಾಯ ಸಂಚಾರದಲ್ಲಿರುವ ಶೀರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಬೆಳ್ತಂಗಡಿ ತಾಲೂಕಿನ ವಿವಿಧ ಪುಣ್ಯಕ್ಷೇತ್ರಗಳ ಸಂದರ್ಶನ ಕೈಗೊಂಡಿದ್ದು, ಇದರ ಭಾಗವಾಗಿ ಜ.2ರಂದು ಅರಸಿನಮಕ್ಕಿ ಗ್ರಾಮದ ಶ್ರೀ ಬೂಡುಮುಗೇರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದರು.

ಸ್ವಾಮೀಜಿಗಳ ಆಗಮನದ ವೇಳೆ ದೇವಳದ ಭಕ್ತರಿಂದ ಪೂರ್ಣ ಕುಂಭ ಸ್ವಾಗತ ನೆರವೇರಿಸಲಾಯಿತು. ಬಳಿಕ ಪಟ್ಟದ ದೇವರ ವಿಶೇಷ ಪೂಜೆ ಭಕ್ತಿಭಾವದಿಂದ ನಡೆಯಿತು. ಈ ಸಂದರ್ಭದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್ ಕೃಷ್ಣ ಅವರು ನೆರೆದ ಭಕ್ತರಿಗೆ ಶ್ರೀಕೃಷ್ಣನ ಸಂದೇಶವನ್ನು ನೀಡಿದರು.

ಅನಂತರ ಶ್ರೀ ಶ್ರೀ ವೇದವರ್ಧನ ಸ್ವಾಮೀಜಿ ಅವರು ಅಪಾರ ಭಕ್ತವೃಂದವನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಈ ಸಂದರ್ಭ ದೇವಳ ಹಾಗೂ ಗ್ರಾಮಸ್ಥರ ವತಿಯಿಂದ ನಾಗರಿಕ ಸನ್ಮಾನ ಕಾರ್ಯಕ್ರಮವೂ ಜರುಗಿತು.

ಕಾರ್ಯಕ್ರಮದಲ್ಲಿ ಶೀರೂರು ಮಠದ ದಿವಾನರಾದ ಉದಯ ಕುಮಾರ್, ದೇವಳದ ಅನುವಂಶೀಯ ಆಡಳಿತ ಮೊಕ್ತೇಸರ ರಾಜಗೋಪಾಲ್ ಪೆರಡೇಲು, ನಾಗರಿಕ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಮಂಜುನಾಥ್ ಗೌಡ ಕೈಕುರೆ, ಕಾರ್ಯಕ್ರಮದ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಮಧುಕರ್ ರಾವ್ ಮಚ್ಚಳೆ, ಸಮಿತಿ ಸದಸ್ಯರು ಹಾಗೂ ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು.

  •  

Leave a Reply

error: Content is protected !!