


ನೆಲ್ಯಾಡಿ: ಕೌಕ್ರಾಡಿ ಗ್ರಾಮದ ಕಟ್ಟೆಮಜಲು ಶಿರಾಡಿ ಧೂಮಾವತಿ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಜ.3 ಮತ್ತು ಜ.4ರಂದು ಎರಡು ದಿನಗಳ ಕಾಲ ಸಾಂಪ್ರದಾಯಿಕ ವಿಧಿ–ವಿಧಾನಗಳೊಂದಿಗೆ ನೇಮೋತ್ಸವ ಅದ್ಧೂರಿಯಾಗಿ ನಡೆಯಿತು.
ಜ.3ರಂದು ಬೆಳಿಗ್ಗೆ 8ರಿಂದ ದೈವಗಳ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಹೋಮ ನಡೆಯಿತು. ಬಳಿಕ ಮುಳಿಂಗಾರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪರ್ವ, ಕ್ಷೇತ್ರದ ನಾಗ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ ನೆರವೇರಿತು. ನಂತರ ಕ್ಷೇತ್ರದ ದೈವಗಳಿಗೆ ವಿಶೇಷ ಪರ್ವ ವಿಧಿವಿಧಾನಗಳೊಂದಿಗೆ ಜರುಗಿತು. ಸಂಜೆ 3ರಿಂದ ಪುತ್ಯೆ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮಹಾರಂಗಪೂಜೆ, ದೈವಗಳ ಭಂಡಾರ ಇಳಿಸುವ ಕಾರ್ಯಕ್ರಮ, ರಾತ್ರಿ 8ರಿಂದ ಅನ್ನದಾನ ಕಾರ್ಯಕ್ರಮ ನಡೆಯಿತು, ಬಳಿಕ ರಕ್ತೇಶ್ವರಿ, ಕಲ್ಲುರ್ಟಿ ಹಾಗೂ ಪಂಜುರ್ಲಿ ದೈವಗಳ ನೇಮ ಭಕ್ತಿಭಾವದಿಂದ ಜರುಗಿತು.
ಜ. 4ರಂದು ಬೆಳಿಗ್ಗೆ ಶೀರಾಡಿ ಧೂಮಾವತಿ ದೈವಗಳ ನೇಮೋತ್ಸವ ಬಳಿಕ ಹರಿಕೆ ಒಪ್ಪಿಸುವುದು ಹಾಗೂ ಬೂಳ್ಯ ವಿತರಣೆ ನಡೆಯಿತು. ಮಧ್ಯಾಹ್ನ 12ರಿಂದ ಬಚ್ಚನಾಯಕ ದೈವದ ನೇಮ, ಮಧ್ಯಾಹ್ನ ಅನ್ನ ಸಂತರ್ಪಣೆ, ನಂತರ ಮಂತ್ರ ಗುಳಿಗ ನೇಮ ನೆರವೇರಿತು. ನೇಮೋತ್ಸವದ ಅಂತ್ಯದಲ್ಲಿ ಭಂಡಾರವನ್ನು ಚಾವಡಿಗೆ ಏರಿಸುವ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆದವು.
ಈ ಪವಿತ್ರ ಸಂದರ್ಭದಲ್ಲಿ ದೈವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸದಾನಂದ ಪಿ. ಕುಂಡಡ್ಕ, ಕಾರ್ಯದರ್ಶಿ ಶಶಿಧರ ಶೆಟ್ಟಿ ಪರಂತಮೂಲೆ, ಉಪಾಧ್ಯಕ್ಷೆ ಸುಮತಿ ಕೃಷ್ಣಪ್ಪ ಗೌಡ ಕಟ್ಟೆಮಜಲು ಉಪಸ್ಥಿತರಿದ್ದರು. ಸಮಿತಿ ಸದಸ್ಯರಾದ ಮುತ್ತಪ್ಪ ಗೌಡ ಮುಳಿಂಗಾರು, ಕೃಷ್ಣಪ್ಪ ಕಟ್ಟೆಮಜಲು, ಸುಂದರ ರಾಣ್ಯ ಹಳೆಮುಂಡ್ಲ, ಅಣ್ಣು ಪಿಲತ್ತಿಲ, ಚಂದ್ರಶೇಖರ ಹಳೆಮುಂಡ್ಲ, ವಸಂತ ಹೆಚ್. ಹೊಸಮನೆ, ನವೀನ ಕೆ.ಎಸ್. ಕಟ್ಟೆಮಜಲು, ಸೇಸಪ್ಪ ಮುಳಿಂಗಾರು ಹಾಗೂ ಮಹಿಳಾ ಸದಸ್ಯರಾದ ವೀಣಾ ಗೋಪಾಲ್ ಮುಳಿಂಗಾರು, ಪ್ರೇಮ ತಿಮ್ಮಪ್ಪ ಗೌಡ ಕಟ್ಟೆಮಜಲು, ರತ್ನಾ ನಾರಾಯಣಶೆಟ್ಟಿ ಕಟ್ಟೆಮಜಲು, ಮುಖ್ಯ ಸಲಹೆಗಾರರಾದ ಸಿವಿಲ್ ಇಂಜಿನಿಯರ್ ಚಂದ್ರಹಾಸ ಪನ್ಯಾಡಿ, ನಿವೃತ್ತ ಮುಖ್ಯಶಿಕ್ಷಕ ದಿನಕರ ರಾವ್ ಮನಸುಮ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು ಸೇರಿದಂತೆ ಗ್ರಾಮದ ಹಾಗೂ ಪರವೂರ ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.





