ಜ.25ರಂದು ಅರಸಿನಮಕ್ಕಿ ಹಿಂದು ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ

ಶೇರ್ ಮಾಡಿ

ಅರಸಿನಮಕ್ಕಿ: ಹತ್ಯಡ್ಕ, ಶಿಶಿಲ, ಶಿಬಾಜೆ ಹಾಗೂ ರೆಖ್ಯ ನಾಲ್ಕು ಗ್ರಾಮಗಳನ್ನು ಒಳಗೊಂಡ ಅರಸಿನಮಕ್ಕಿ ಮಂಡಲದ ವತಿಯಿಂದ ಆಯೋಜಿಸಲಾಗಿರುವ ಹಿಂದು ಸಂಗಮ ಕಾರ್ಯಕ್ರಮವು ಜ.25ರಂದು ಸಂಜೆ 4.30ಕ್ಕೆ ಅರಸಿನಮಕ್ಕಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಆಮಂತ್ರಣ ಪತ್ರಿಕೆ ಹಾಗೂ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹಿಂದು ಸಂಗಮ ಸಂಯೋಜಕರಾದ ರಾಘವೇಂದ್ರ ನಾಯಕ್, ಅರಸಿನಮಕ್ಕಿ ಮಂಡಲದ ವೀಕ್ಷಕರಾದ ಪ್ರಶಾಂತ್ ಶೆಟ್ಟಿ ದೇರಾಜೆ, ತಾಲೂಕು ಸಮಿತಿ ಸದಸ್ಯ ವೃಷಾಂಕ್ ಖಾಡಿಲ್ಕರ್, ಶಿಬಾಜೆ ವಿ.ಹಿಂ.ಪ. ಅಧ್ಯಕ್ಷ ಪುರಂದರ ರಾವ್ ಉರ್ತಾಜೆ, ಕರುಣಾಕರ ಶಿಶಿಲ, ಜಯಪ್ರಸಾದ್ ಶೆಟ್ಟಿಗಾರ್, ಸುಬ್ರಾಯ ಗೌಡ ಶಿಶಿಲ, ಗಣೇಶ್ ಹೊಸ್ತೋಟ, ಭುವನ್, ವಿನಯಚಂದ್ರ ಪೆರ್ಲ, ಮಹೇಶ್ ಶೆಟ್ಟಿಗಾರ್, ಯೋಗೀಶ್ ಗೌಡ ಬೇಂಗಳ, ಪ್ರಸನ್ನ ಬೇಂಗಳ, ಗಣೇಶ್ ಗೌಡ ಪೆರ್ಲ, ಗಣೇಶ್ ಕುಲಾಲ್, ನವೀನ್ ರೈ, ಮೋಹನ್ ನಾಯ್ಕ್, ರಾಧಾಕೃಷ್ಣ ಗುತ್ತು, ಶ್ರೀಕಾಂತ್ ಕಾಂತ್ರೆಲ್, ದಯಾನಂದ ಗೌಡ ಉಡ್ಯೇರೆ, ಸುದರ್ಶನ್ ಪಡ್ಡಾಯಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!