

ನೇಸರ ಮಾ.18: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು – ಮಂಗಳೂರಿನ ಮಧ್ಯೆ ನೆಲ್ಯಾಡಿ ಪೇಟೆಯಲ್ಲಿ ಜೆಸಿಬಿ ಹಾಗೂ ರಿಕ್ಷಾದ ಮಧ್ಯೆ ಅಪಘಾತ ಸಂಭವಿಸಿ, ಅಪಘಾತದ ತೀವ್ರತೆಗೆ ರಿಕ್ಷಾ ಪಲ್ಟಿ ಹೊಡೆದು, ರಿಕ್ಷಾ ಚಾಲಕ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಆತನನ್ನು ಮಂಗಳೂರಿಗೆ ಆಸ್ಪತ್ರೆಗೆ ಆಂಬುಲೆನ್ಸ್ ಮುಖಾಂತರ ಸಾಗಿಸಲಾಗಿದೆ.
ನೆಲ್ಯಾಡಿಯ ರಿಕ್ಷಾ ಚಾಲಕ ಕಟ್ಟೆಮಜಲಿನ ನಿವಾಸಿ ಜಯರಾಮ ಎಂದು ಗುರುತಿಸಲಾಗಿದೆ.