

ನೆಲ್ಯಾಡಿ: ಏಳು ದಿನದ ಹಿಂದೆ ನಡೆದ ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿ ನಿವಾಸಿ ಕೆ.ಸಿ ವರ್ಗಿಸ್(73) ಅವರ ಸಾವು ತಲೆ ಹಾಗೂ ದೇಹದ ಭಾಗಗಳಿಗೆ ಬಲವಾದ ಪೆಟ್ಟು ಬಿದ್ದಿರುವುದರಿಂದಲೇ ಆಗಿದೆ ಎಂಬ ಶವ ಪರೀಕ್ಷೆಯ ವರದಿ ಆಧರಿಸಿ ಉಪ್ಪಿನಂಗಡಿ ಪೊಲೀಸರು ಕೊಲೆ ಕೇಸು ದಾಖಲಿಸಿ ಕೊಂಡು ತನಿಖೆ ಮುಂದುವರಿಸಿದ್ದಾರೆ.
ಯು ಡಿ ಆರ್ ದಾಖಲೆಯಾಗಿತ್ತು:
ಘಟನೆ ಕುರಿತಂತೆ ಮೃತರ ಪುತ್ರ ಆಟೋರಿಕ್ಷ ಚಾಲಕ ಕೆ.ವಿ ತೋಮಸ್ ಅವರು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಂದೆ ಕೆ.ಸಿ ವರ್ಗೀಸ್ ಮತ್ತು ತಾಯಿ ಎಸ್ತೆರಾ ವರ್ಗೀಸ್ ಅವರು ಕೊಪ್ಪ ಮಾದೇರಿ ಎಂಬಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದರು ಫೆ.8ರಂದು ತಾಯಿಯನ್ನು ಚಿಕಿತ್ಸೆಗೆ ನಿಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ರಾತ್ರಿ 8ಗಂಟೆಗೆ ಮಾವನ ಮನೆಯಲ್ಲಿ ಬಿಟ್ಟಿದ್ದೇನೆ ಆ ಸಮಯ ಕೊಪ್ಪ ಮಾದೇರಿ ಮನೆಯಲ್ಲಿ ತಂದೆ ಕೆ.ಸಿ ವರ್ಗೀಸ್ ಮಾತ್ರ ಇದ್ದರು ಬಳಿಕ ನೆಲ್ಯಾಡಿ ಪೇಟೆಯಲ್ಲಿ ಆಟೋ ಬಾಡಿಗೆ ಮಾಡಿ ರಾತ್ರಿ 11 ಗಂಟೆಗೆ ನನ್ನ ಮನೆಗೆ ಹೋಗುವಾಗ ತಂದೆ ತಾಯಿ ವಾಸ ಮಾಡಿಕೊಂಡಿದ್ದ ಮನೆಯ ಬಾಗಿಲು ತೆರೆದುಕೊಂಡಿರುವುದನ್ನು ನೋಡಿ ಮನೆಯೊಳಗೆ ಹೋದಾಗ ತಂದೆ ಕೆ.ಸಿ ವರ್ಗೀಸ್ ಅವರು ಮಂಚದ ಕೆಳಗೆ ಬಿದ್ದುಕೊಂಡು ತಲೆಗೆ ಗಾಯವಾಗಿರುವುದನ್ನು ಕಂಡು 108 ಆಂಬುಲೆನ್ಸ್ ಬರ ಹೇಳಿ ಅದರಲ್ಲಿ ಮಾವನೊಂದಿಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಮುಂದೆ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಕೆ.ಸಿ ವರ್ಗೀಸ್ ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ತಂದೆ ಒಬ್ಬರೇ ಮನೆಯಲ್ಲಿದ್ದ ಸಮಯ ಅವರ ಮರಣ ಸಂಭವಿಸಿದ್ದು ಇದರಲ್ಲಿ ಸಂಶಯವಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದರು.
ಕೊಲೆ ಕೇಸು ದಾಖಲು: ಕೆ.ಸಿ ವರ್ಗೀಸ್ ಸಾವಿಗೆ ಸಂಬಂಧಿಸಿ ಪೊಲೀಸರು ಸ್ಥಳ ಮಹಜಾರು ನಡೆಸಿದ್ದರು ಘಟನೆ ಸ್ಥಳಕ್ಕೆ ವಿಧಿ ವಿಜ್ಞಾನ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಮಂಗಳೂರು ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು ಶವ ಪರೀಕ್ಷೆ ನಡೆಸಿದ ವೈದ್ಯರು ಮೃತನಿಗೆ ತಲೆಯೊಂದಿಗೆ ದೇಹದ ವಿವಿಧ ಭಾಗಗಳ ಮೇಲೂ ಬಹು ಗಾಯಗಳು ಕಂಡುಬಂದಿದ್ದು, “ಬ್ಲಂಟ್ ಫೋರ್ಸ್ ಅಸಾಲ್ಟ್‌ನಿಂದಾದ ಗಾಯಗಳು ಮರಣಕ್ಕೆ ಕಾರಣ” ಎಂದು ವೈದ್ಯರು ವರದಿ ನೀಡಿರುವುದಾಗಿ ವರದಿಯಾಗಿದೆ ತನಿಖೆ ಸಂದರ್ಭದಲ್ಲಿ ಇದೊಂದು ಕೊಲೆ ಪ್ರಕರಣವೆಂದು ಕಂಡು ಬಂದಿರುವುದರಿಂದ ಕೆ.ಸಿ ವರ್ಗೀಸ್ ಅವರನ್ನು ಯಾವುದೋ ವಿಚಾರಕ್ಕೆ ಯಾರೋ ವ್ಯಕ್ತಿಗಳು ಫೆ.08ರಂದು ರಾತ್ರಿ 7 ರಿಂದ 11 ಗಂಟೆಯ ಮಧ್ಯದ ಅವಧಿಯಲ್ಲಿ ಯಾವುದೋ ಸಾಧನದಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತರ ಪುತ್ರ ಭಾವಂದಿರಬ್ಬರ ಸೆರೆ :
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತ ಕೆ ಸಿ ವರ್ಗೀಸ್ ಪುತ್ರ ಹಾಗೂ ಭಾವಂದಿರಬ್ಬರನ್ನು ಬಂಧಿಸಿದ್ದಾರೆ. ಮೃತರ ಪುತ್ರ ಕೆ.ವಿ ತೋಮಸ್ ಯಾನೆ ವಿಲ್ಸನ್ ನೆಲ್ಯಾಡಿ (30), ಸಿ ಟಿ ರಾಜು ಯಾನೆ ವರ್ಗಿಸ್ ಅರಸಿನಮಕ್ಕಿ(59), ಚಾಕೋಚ ನೆಲ್ಯಾಡಿ(51),ಬಂಧಿತರು.
ಮೃತ ಕೆ ಸಿ ವರ್ಗೀಸ್ ತನ್ನ ಹೆಂಡತಿ ಎಸ್ತೆರಾ ವರ್ಗೀಸ್ ಅವರಿಗೆ ಹೊಡೆದಿದ್ದು ಆಕೆಯು ಮನೆಯಿಂದ ಹೊರಗೆ ಸ್ವಲ್ಪ ದೂರ ಹೋಗಿ ಕುಳಿತಿದ್ದನ್ನು ನೋಡಿದ ಒಬ್ಬ ವ್ಯಕ್ತಿ ಈ ಬಗ್ಗೆ ಆಕೆಯ ಮಗ ಕೆ.ವಿ ತೋಮಸ್ ಗೆ ತಿಳಿಸಿದರು, ಬಳಿಕ ಮಗ ತೋಮಸ್ ತನ್ನ ಪರಿಚಯದ ಆಟೋರಿಕ್ಷಾ ದವರನ್ನು ಬರಮಾಡಿ ತಾಯಿಯನ್ನು ಆಸ್ಪತ್ರೆಗೆ ಕಳಿಸಿದ್ದ ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು ನೋಡಿ ತನ್ನ ತಮ್ಮ ಚಾಕೋಚನಿಗೆ ಕಾಲ್ ಮಾಡಿ ಅಕ್ಕನಿಗೆ ಅವರ ಗಂಡ ಹೊಡೆದಿರುವುದಾಗಿ ತಿಳಿಸಿ ಬೇಗ ಬಾ ಎಂದು ಕರೆದಿದ್ದ ಹಾಗೆ ಬಂದು ಥಾಮಸ್ ಗೆ ಕರೆ ಮಾಡಿ ವರ್ಗೀಸ್ ಅವರನ್ನು ಹೆದರಿಸಬೇಕೆಂದು ಚರ್ಚೆ ಮಾಡಿ ತೋಮಸ್ ನನ್ನು ಸ್ವಲ್ಪ ದೂರ ಹೊರಗೆ ಬಿಟ್ಟು ಚಾಕೋಚ ಮತ್ತು ರಾಜು ಅವರು ಒಳಗೆ ಹೋಗಿ ಕೆ ಸಿ ವರ್ಗೀಸ್ ಅವರಿಗೆ ಕಟ್ಟಿಗೆಯಿಂದ ಹೊಡೆದು ಹೊರಗೆ ಬಂದು ತೋಮಸ್ ಅವರಲ್ಲಿ ಅವರಿಗೆ ಸರಿಯಾಗಿ ಹೊಡೆದಿದ್ದೇವೆ ಅವರನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗು ಎಂದು ಹೇಳಿ ಹೋಗಿರುವುದಾಗಿದೆ ನಂತರ ತೋಮಸ್ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದು ನನ್ನ ತಂದೆಯು ಮಂಚದಿಂದ ಕೆಳಗೆ ಬಿದ್ದು ಅಲ್ಲಿಂದ ಕಲ್ಲಿಗೆ ತಲೆ ತಾಗಿ ಮೃತಪಟ್ಟಿರಬಹುದುದಾಗಿ ತಿಳಿಸಿ ಇದೊಂದು ಆಸ್ವಾಭಾವಿಕ ಪ್ರಕರಣವೆಂದು ತಿಳಿಸಿದ್ದು ಕೂಲಂಕುಶವಾಗಿ ತನಿಖೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.







