


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಕಡಬ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಇವರ ಆಶ್ರಯದಲ್ಲಿ ಭಾನುವಾರದಂದು ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಆವರಣದಲ್ಲಿ ನವಜೀವನೋತ್ಸವ ಕ್ರೀಡಾಕೂಟ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಎ., ನೆರವೇರಿಸಿದ ಮಾತನಾಡಿ ಅವರು ಗ್ರಾಮಾಭಿವೃದ್ಧಿ ಯೋಜನೆಯು ಸಮಾಜಮುಖಿ ಕ್ರಿಯೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಮದ್ಯವರ್ಜನ ಶಿಬಿರಗಳ ಮೂಲಕ ನೂರಾರು ಕುಟುಂಬಗಳಿಗೆ ನವಜೀವನ ನೀಡುತ್ತಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ಗಣೇಶ್ ಆಚಾರ್ಯ ಮಾತನಾಡಿ, ಈಗಾಗಲೇ 2050ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರಗಳು ನಡೆದಿದ್ದು, ಅವುಗಳ ಮೂಲಕ ಲಕ್ಷಾಂತರ ಜನರು ಮದ್ಯವ್ಯಸನದಿಂದ ದೂರವಾಗಿ ಸುಧಾರಿತ ಜೀವನ ನಡೆಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ. ಸವಣೂರುವಹಿಸಿದರು. ವೇದಿಕೆಯಲ್ಲಿ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಶಿಬಿರಾಧಿಕಾರಿ ರಮೇಶ್ ಕೆ, ವಿದ್ಯಾಧರ, ಪ್ರಗತಿಬಂಧು ಸ್ವಸಹಾಯ ಸಂಘ ನೆಲ್ಯಾಡಿ ವಲಯದ ವಲಯಾಧ್ಯಕ್ಷರಾದ ಕುಶಾಲಪ್ಪ ಗೌಡ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ರಮೇಶ್ ಆರ್ ಬಾಣಜಾಲು, ಹಿರಿಯ ನವಜೀವನ ಸದಸ್ಯರಾದ ಬಾಬು ಗೌಡ, ಸೇವಾಪ್ರತಿನಿಧಿ ನಮಿತ ಶೆಟ್ಟಿ, ಸಂತೋಷ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಮೇಲ್ವಿಚಾರಕ ಆನಂದ ಡಿ.ಬಿ. ಸ್ವಾಗತಿಸಿ ವಂದಿಸಿದರು.
ಸಮಾರೋಪ ಸಮಾರಂಭ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಣೆ:
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನೆಲ್ಯಾಡಿ ಹೊರ ಠಾಣಾಧಿಕಾರಿ ಪ್ರವೀಣ್ ಕುಮಾರ್ ಮಾತನಾಡಿ ಕುಡಿತದ ಚಟದಿಂದ ದೂರವಿದ್ದು ಒಳ್ಳೆಯ ಜೀವನ ನಡೆಸಲು ಮನಸ್ಥಿತಿ ಬದಲಾಗಬೇಕು ಎಂದು ಸಂದೇಶ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಹೇಶ್ ಕೆ. ಸವಣೂರು ಮಾತನಾಡಿ, ದುಶ್ಚಟ ಎಂಬುದು ಜೀವನದ ಮೂಲಕ್ಕೆ ಹೊಡೆತ ನೀಡುವ ಮಾರಕ ಮಾರಿಯಾಗಿದ್ದು, ಅವುಗಳಿಂದ ದೂರವಿರುವುದೇ ನಿಜವಾದ ನವಜೀವನ ಎಂದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ವಲಯದ ವಲಯಾಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಜೆಸಿಐ ನ ಪೂರ್ವಾಧ್ಯಕ್ಷ ಸುಚಿತ್ರ ಜೆ. ಬಂಟ್ರಿಯಾಲ್, ನೆಲ್ಯಾಡಿ ಪ್ರಗತಿಬಂಧು ಸ್ವಸಹಾಯ ಸಂಘದ ವಲಯಾಧ್ಯಕ್ಷ ಕುಶಾಲಪ್ಪ ಗೌಡ, ಕೌಕ್ರಾಡಿ ವಲಯದ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಗೌಡ, ಶಿಬಿರಾಧಿಕಾರಿ ರಮೇಶ ಕೆ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ರಮೇಶ್ ಆರ್ ಬಾಣಜಾಲು, ಮದ್ಯವರ್ಜನ ಶಿಬಿರದ ಕೋಶಾಧಿಕಾರಿ ಸೆಬಾಸ್ಟಿನ್ ಪಿ ಜಿ, ಗೋಳಿತೊಟ್ಟು ಜನಜಾಗೃತಿ ವಲಯಾಧ್ಯಕ್ಷ ನೋಣಯ್ಯ ಪೂಜಾರಿ ಅಂಬರ್ಜೆ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿದರು, ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ನಮಿತ ಶೆಟ್ಟಿ ಹಾಗೂ ಸಂತೋಷ್ ಸಹಕರಿಸಿದರು.
ನವಜೀವನ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು ಹಾಗೂ ನೂತನ ನವಜೀವನ ಸದಸ್ಯರು ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರನ್ನು, ಯೋಜನಾಧಿಕಾರಿಗಳನ್ನು, ಪ್ರಾದೇಶಿಕ ಯೋಜನಾಧಿಕಾರಿಗಳನ್ನು, ನೆಲ್ಯಾಡಿ ವಲಯಾಧ್ಯಕ್ಷರನ್ನು ಮತ್ತು ಇತರರನ್ನು ಅಭಿನಂದಿಸಿದರು.





