ಇಚ್ಲಂಪಾಡಿ: ಎಲ್ಐಸಿ ಏಜೆಂಟ್ ರವೀಂದ್ರ ಬಿ ಬಿಜೇರು ನಿಧನ

ಶೇರ್ ಮಾಡಿ
ಇಚ್ಲಂಪಾಡಿ: ಎಲ್ಐಸಿ ಏಜೆಂಟ್ ರವೀಂದ್ರ ಬಿ ಬಿಜೇರು ನಿಧನ

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಬಿಜೇರು ನಿವಾಸಿ ರವೀಂದ್ರ ಬಿ (53) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರದಂದು ನಿಧನರಾದರು.

ಮೃತರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆದ ಬಳಿಕ ಭಾನುವಾರ ಮನೆಗೆ ಮರಳುವ ವೇಳೆ ದಾರಿಮಧ್ಯೆ ಅಕಾಲಿಕವಾಗಿ ಅವರು ನಿಧನರಾದರೆಂದು ಕುಟುಂಬ ಮೂಲಗಳು ತಿಳಿಸಿವೆ.

ರವೀಂದ್ರ ಬಿ ಅವರು ಕೆಲವು ಕಾಲ ಎಲ್‌ಐಸಿ ಏಜೆಂಟ್ ಆಗಿ ಸೇವೆ ಸಲ್ಲಿಸಿ ಸ್ಥಳೀಯವಾಗಿ ಪರಿಚಿತರಾಗಿದ್ದರು.

ಮೃತರು ಪತ್ನಿ, ಗಂಡು ಹಾಗೂ ಹೆಣ್ಣು ಮಗು, ತಾಯಿ ಸೇರಿದಂತೆ ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.

Leave a Reply

error: Content is protected !!