




ಬೆಳ್ತಂಗಡಿ: ರಮ್ಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ವೇಣೂರು ಆರಕ್ಷಕ ಠಾಣ ಉಪನಿರೀಕ್ಷಕ ಅಕ್ಷಯ ಡವಗಿ ಅವರ ಅಧ್ಯಕ್ಷತೆಯಲ್ಲಿ ಮಾ.14 ರಂದು ನಡೆಯಿತು.
ವೇಣೂರು ಠಾಣಾ ವ್ಯಾಪ್ತಿಯ ಮಸೀದಿ ಆಡಳಿತ ಸಮಿತಿ ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗನ್ನುದ್ದೇಶಿಸಿ ಮಾತಾಡಿದ ಠಾಣಾಧಿಕಾರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸಿ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುವಂತೆ ವಿನಂತಿಸಿದರು. ನಮ್ಮ ಠಾಣಾ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಅತ್ಯಂತ ಶಾಂತಿಯಿಂದ ಹಬ್ಬ ಹರಿದಿನಗಳ ಆಚರಣೆಯ ಇತಿಹಾಸವಿದ್ದರೋ, ಮುಂಜಾಗೃತಾ ಕ್ರಮವಾಗಿ ಈ ಸಭೆಯನ್ನು ಕರೆಯಲಾಗಿದ್ದು ಬಂದು ಸಲಹೆ ಸೂಚನೆ ನೀಡಿದ್ದಕ್ಕೆ ವಂದನೆಗಳು ಮುಂದೆಯೂ ನಿಮ್ಮಲ್ಲರ ಸಹಕಾರ ಇರಲಿ ಎಂದು ಹಬ್ಬಕ್ಕೆ ಶುಭ ಹಾರೈಸಿದರು.
ಎ ಎಸ್ ಐ ವೆಂಕಟೇಶ್ ಮತ್ತು ಸಿಬಂದಿ ವರ್ಗ, ಪತ್ರಕರ್ತ ಎಚ್ ಮಹಮ್ಮದ್ ವೇಣೂರು, ಪಡ್ಡoದಡ್ಕ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ ಪೆರಿಂಜೆ, ಪೆರಿಂಜೆ ಮದರಸ ಸಮಿತಿ ಅಧ್ಯಕ್ಷ ಅಶ್ರಫ್ ಗಾಂಧಿನಗರ, ಪುಲಾಬೆ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಲಿಯಬ್ಬ, ಕರಿಮನೇಲು ಶಾಂತಿ ನಗರ ಮದರಸ ಸಮಿತಿ ಅಧ್ಯಕ್ಷ ಪಿ.ಎಚ್ ಅಶ್ರಫ್, ಇಸ್ಮಾಯಿಲ್ ಉಳ್ತೂರು ಕೆಪಿ ಬಸೀರ್, ಪುತ್ತುಮೋನು ಕಾಶಿಪಟ್ಣ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.





