ಬೆಳ್ತಂಗಡಿಯಲ್ಲಿ ಕೋಟ್ಯಂತರ ವಂಚನೆ ಹಗರಣ: ಶ್ರೀರಾಮ ಕ್ರೆಡಿಟ್ ಸೊಸೈಟಿ ವಿರುದ್ಧ 40ಕೋಟಿ ರೂ.ವಂಚನೆ ಆರೋಪ;ಸಿಐಡಿ ತನಿಖೆ ಆರಂಭ

ಶೇರ್ ಮಾಡಿ
ಬೆಳ್ತಂಗಡಿಯಲ್ಲಿ ಕೋಟ್ಯಂತರ ವಂಚನೆ ಹಗರಣ: ಶ್ರೀರಾಮ ಕ್ರೆಡಿಟ್ ಸೊಸೈಟಿ ವಿರುದ್ಧ 40ಕೋಟಿ ರೂ.ವಂಚನೆ ಆರೋಪ;ಸಿಐಡಿ ತನಿಖೆ ಆರಂಭ

ಬೆಳ್ತಂಗಡಿ: ತಾಲೂಕಿನ ಶ್ರೀ ರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ರಿ)ಯಲ್ಲಿ ಗ್ರಾಹಕರಿಂದ ಸಂಗ್ರಹಿಸಲಾದ ಸುಮಾರು 40 ಕೋಟಿ ರೂಪಾಯಿ ಠೇವಣಿ ಹಣವನ್ನು ಹಿಂದಿರುಗಿಸದೇ ವಂಚನೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಆರಂಭವಾಗಿದೆ.

ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಸಿಐಡಿ ಅಧಿಕಾರಿಗಳ ತಂಡ ಬೆಳ್ತಂಗಡಿಗೆ ಆಗಮಿಸಿ, ನಗರದ ಜ್ಯೂನಿಯರ್ ಕಾಲೇಜು ರಸ್ತೆಯ ರಾಮನಗರದಲ್ಲಿರುವ ಸೊಸೈಟಿಯಲ್ಲಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದೆ.

ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಸೊಸೈಟಿಯಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಕೋಟ್ಯಂತರ ರೂ. ಠೇವಣಿ ಹಣವನ್ನು ಹಿಂದಿರುಗಿಸದೇ ವಂಚನೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿದಂತೆ ಒಟ್ಟು 13 ಮಂದಿ ಗ್ರಾಹಕರು 2025ರ ಮೇ 22ರಂದು ಸೊಸೈಟಿಯ 14 ಮಂದಿ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ 2025ರ ಮೇ 23ರಂದು ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡಿಪಾಸಿಟರ್ಸ್ ಇನ್ ಫೈನಾನ್ಷಿಯಲ್ ಎಸ್ಟಾಬ್ಲಿಷ್ಮೆಂಟ್ಸ್ ಕಾಯ್ದೆ, 2004ರ ಕಲಂ 9ರಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣವು ನಂತರ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ವರ್ಗಾಯಿಸಲ್ಪಟ್ಟು, ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಸಿಐಡಿಗೆ ಹಸ್ತಾಂತರಿಸಲಾಗಿದೆ. 2021ರಿಂದ 2024ರವರೆಗೆ ಸೊಸೈಟಿಯ ಆಡಳಿತದಲ್ಲಿದ್ದ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಎಚ್., ಉಪಾಧ್ಯಕ್ಷ ಸದಾನಂದ ಎಂ. ಉಜಿರೆ, ನಿರ್ದೇಶಕರುಗಳಾದ ವಿಶ್ವನಾಥ ಆರ್. ನಾಯಕ್, ಪ್ರಮೋದ್ ಆರ್. ನಾಯಕ್, ಜಗನ್ನಾಥ ಪಿ., ರತ್ನಾಕರ, ಸುಮಾ ದಿನೇಶ್ ಉಜಿರೆ, ನಯನಾ ಶಿವಪ್ರಸಾದ್, ಮೋಹನ್ ದಾಸ್ ಕೆ., ಕಿಶೋರ್ ಕುಮಾರ್ ಲಾಯಿಲ ಹಾಗೂ ಸಿಬ್ಬಂದಿಗಳಾದ ಸರಿತಾ ಎಸ್. ಮತ್ತು ವಿನೋದ್ ಕುಮಾರ್ ಸಿ.ಎಚ್. ಸೇರಿ ಒಟ್ಟು 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ದಯಾನಂದ ನಾಯಕ್, ನಿಧೀಶ್ ಡಿ. ನಾಯಕ್, ಶ್ರದ್ಧಾ ಬಿ., ಮಾಲಿನಿ ಟಿ. ರಾವ್, ತುಕರಾಮ್ ರಾವ್, ಅಕ್ಷಯಾ ಟಿ. ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ. ಗಣೇಶ್ ಭಟ್ ಮತ್ತು ವಿದ್ಯಾ ಭಟ್ ಸೇರಿ 13 ಮಂದಿ ದೂರುದಾರರಾಗಿದ್ದಾರೆ.

ಪ್ರಸ್ತುತ ಬೆಂಗಳೂರು ಸಿಐಡಿ ಇನ್‌ಸ್ಪೆಕ್ಟರ್ ಹರೀಶ್ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ಮುಂದುವರಿಸಿದೆ.

Leave a Reply

error: Content is protected !!