ನೇಸರ ಮಾ.20: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಉಪ್ಪಿನಂಗಡಿ ಹೋಬಳಿ ಇಚಿಲಂಪಾಡಿ ಸರ್ವೆ ನಂ, 110/4 ರಲ್ಲಿ ಸುಮಾರು 66 ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ಆಟದ ಬಯಲಿಗೆಂದು ಕಾದಿರಿಸಿದ ಜಾಗದ ಕೆಲವು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಇದ್ದು, ಒಬ್ಬರಿಂದ ಒಬ್ಬರಿಗೆ ಮಾರಾಟ ಮಾಡಿ ಹಣ ಸಂಪಾದನೆ ಲಾಬಿ ನಡೆಸುತ್ತಿದ್ದರು. ಇದನ್ನು ಅರಿತ ನೀತಿ ತಂಡ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿರುತ್ತಾರೆ.
ಮನವಿ ಮೇರೆಗೆ ಮಾ.18 ರಂದು ಕಡಬ ಕಂದಾಯ ನಿರೀಕ್ಷಕರು, ಕೌಕ್ರಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಭೂಮಾಪಕರು, ಗ್ರಾಮ ಲೆಕ್ಕಾಧಿಕಾರಿ, ನೀತಿ ತಂಡದ ರಾಜ್ಯಾಧ್ಯಕ್ಷರಾದ ಜಯಂತ್.ಟಿ ಹಾಗೂ ಸದಸ್ಯರು, ಸಮೂಹ ಸಂಪನ್ಮೂಲ ವ್ಯಕ್ತಿ, ನೇರ್ಲ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಕಾದಿರಿಸಿದ ಜಾಗದ ಆಳತೆ ಕೆಲವು ಒತ್ತುವರಿದಾರರ ಹಾಗೂ ಆ ವಾರ್ಡಿನ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಇಚಿಲಂಪಾಡಿ ಶಾಲೆಯ ಎಸ್.ಡಿ.ಎಂ.ಸಿ ಸಮಿತಿಯ ಸಮ್ಮುಖದಲ್ಲಿ ಗಡಿ ಗುರುತು ಮಾಡಲಾಯಿತು.
ಮುಂದಿನ ದಿನಗಳಲ್ಲಿ ನೀತಿ ತಂಡ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡವರ ವಿರುದ್ಧ ಹೋರಾಟ ನಡೆಸಲಿದ್ದಾರೆ ಎಂದು ಜಯಂತ್ ಟಿ, ಅಧ್ಯಕ್ಷರು ನೀತಿ ತಂಡ ತಿಳಿಸಿದರು.
—ಜಾಹೀರಾತು—