ನೆಲ್ಯಾಡಿ ಜೆಸಿಐ ವತಿಯಿಂದ ಕ್ಯಾನ್ಸರ್ ಅರಿವು ಜಾಗೃತಿ ಕಾರ್ಯಕ್ರಮ

ಶೇರ್ ಮಾಡಿ
ನೆಲ್ಯಾಡಿ ಜೆಸಿಐ ವತಿಯಿಂದ ಕ್ಯಾನ್ಸರ್ ಅರಿವು ಜಾಗೃತಿ ಕಾರ್ಯಕ್ರಮ

ನೆಲ್ಯಾಡಿ: ಸಮಾಜದಲ್ಲಿ ಆರೋಗ್ಯ ಜಾಗೃತಿಯನ್ನು ಹೆಚ್ಚಿಸುವ ಉದ್ದೇಶದಿಂದ ನೆಲ್ಯಾಡಿ ಜೆಸಿಐ ಘಟಕದ ವತಿಯಿಂದ ನೆಲ್ಯಾಡಿಯ ದುರ್ಗಾ ಕಾಂಪ್ಲೆಕ್ಸ್‌ನಲ್ಲಿ ಆಯೋಜಿಸಲಾದ ಕ್ಯಾನ್ಸರ್ ಅರಿವು ಕಾರ್ಯಕ್ರಮ ಬುಧವಾರ ದಂದು ಯಶಸ್ವಿಯಾಗಿ ನೆರವೇರಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನೆಲ್ಯಾಡಿ ಜ್ಯೋತಿರ್ವೈದ್ಯ ಹೋಮಿಯೋ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ.ಅನೀಶ್ ಕುಮಾರ್ ಸಾದಂಗಾಯ ಅವರು ಕ್ಯಾನ್ಸರ್ ರೋಗದ ಕುರಿತು ಆಳವಾದ ಮತ್ತು ಸ್ಪಷ್ಟವಾದ ಮಾಹಿತಿ ನೀಡಿದರು. ಅವರು ಕ್ಯಾನ್ಸರ್ ಉಂಟಾಗುವ ಪ್ರಮುಖ ಕಾರಣಗಳು, ಆರಂಭಿಕ ಲಕ್ಷಣಗಳು ಹಾಗೂ ಅದರ ತಡೆಗಟ್ಟುವಿಕೆ ಬಗ್ಗೆ ವಿವರವಾಗಿ ತಿಳಿಸಿದರು. ವಿಶೇಷವಾಗಿ, ಸಮಯಕ್ಕೆ ಸರಿಯಾದ ವೈದ್ಯಕೀಯ ತಪಾಸಣೆ, ಜೀವನಶೈಲಿಯಲ್ಲಿ ಶಿಸ್ತು, ಪೌಷ್ಟಿಕ ಆಹಾರ ಸೇವನೆಗಳಿಂದ ಕ್ಯಾನ್ಸರ್ ತಡೆಗೆ ಸಾಧ್ಯವೆಂದು ಹೇಳಿದರು. ರೋಗವನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಆಗುತ್ತದೆ ಎಂಬ ಮಹತ್ವದ ಸಂದೇಶವನ್ನು ಅವರು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಲ್ಯಾಡಿ ಜೆಸಿಐ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ಅವರು ವಹಿಸಿ ಸ್ವಾಗತಿಸಿದರು. ಜೆಸಿ ವಾಣಿಯನ್ನು ರೇಷ್ಮಾ ವಾಚಿಸಿದರು. ಸುಪ್ರಿತಾ ರವಿಚಂದ್ರ ನಿರೂಪಿಸಿದರು.

Leave a Reply

error: Content is protected !!