





ಸವಣೂರು: ಸವಣೂರು ಗ್ರಾಮ ಸಮಿತಿ ವತಿಯಿಂದ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಸಾಮೂಹಿಕ ಶ್ರೀ ರಾಮ ತಾರಕ ಮಂತ್ರ ಜಪ ಕಾರ್ಯಕ್ರಮ ಭಕ್ತಿಭಾವದಿಂದ ನಡೆಯಿತು.
ಮಾ.26ರಂದು ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಅಧಿಕ ಭಕ್ತರು ಭಾಗವಹಿಸಿ, ಭಕ್ತಿಭಾವದಿಂದ ಶ್ರೀ ರಾಮ ತಾರಕ ಮಂತ್ರ ಜಪದಲ್ಲಿ ತೊಡಗಿದರು. ಕಾರ್ಯಕ್ರಮವು ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಶಾಂತಿ ಹಾಗೂ ಧಾರ್ಮಿಕ ಉತ್ಸಾಹವನ್ನು ತುಂಬಿತು.
ಈ ಸಂದರ್ಭದಲ್ಲಿ ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ ಮಾಹಿತಿ ನೀಡಿದರು. ದೇವಸ್ಥಾನದ ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನರಾ, ಸದಸ್ಯರಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ಮೋನಪ್ಪ ಗೌಡ ಆರೇಲ್ತಡಿ, ಪ್ರೇಮ ಪುಟ್ಟಣ್ಣ ನಾಯ್ಕ ಆರೇಲ್ತಡಿ ಉಪಸ್ಥಿತರಿದ್ದರು.
ಇದೇ ವೇಳೆ ಗ್ರಾಮ ಸಮಿತಿಯ ಅಧ್ಯಕ್ಷ ಮಹೇಶ್ ಕೆ ಸವಣೂರು, ಪ್ರಧಾನ ಕಾರ್ಯದರ್ಶಿ ತಾರನಾಥ ಕಾಯರ್ಗ, ಜಪಯಜ್ಞ ಸಮಿತಿ ಸಂಚಾಲಕರಾದ ಗಿರಿಶಂಕರ ಸುಲಾಯ, ಸಹಸಂಚಾಲಕರಾದ ಭರತ್ ರೈ ಪಾಲ್ತಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ರಥಯಾತ್ರಾ ಸಮಿತಿ ಸಂಚಾಲಕರಾದ ಚೇತನ್ ಕುಮಾರ್ ಕೋಡಿಬೈಲು, ಸಹ ಸಂಚಾಲಕರಾದ ಪ್ರಭಾಕರ ಶೆಟ್ಟಿ ನಡುಬೈಲು, ನಾರಿಕೇಳ ಸಂಚಾಲಕರಾದ ಗಂಗಾಧರ ಪೆರಿಯಡ್ಕ, ಸಹಸಂಚಾಲಕರಾದ ಪುಟ್ಟಣ್ಣ ಗೌಡ ಬದಿಯಡ್ಕ, ಭಜನಾ ಸಮಿತಿಯ ಸಂಚಾಲಕರಾದ ರಾಜೇಶ್ ಇಡ್ಯಾಡಿ, ಸಹಸಂಚಾಲಕರಾದ ಶಿವರಾಮ ಗೌಡ ಮೆದು, ಮಹಿಳಾ ಸಮಿತಿ ಸಂಚಾಲಕರಾದ ಇಂದಿರಾ ಬಿ ಕೆ, ಸಹಸಂಚಾಲಕರಾದ ಆಶಾ ರೈ ಕಲಾಯಿ, ಜಾಲತಾಣದ ಸಂಚಾಲಕರಾದ ಸತೀಶ್ ಬಲ್ಯಾಯ ಮೊದಲಾದವರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.





