





ನೆಲ್ಯಾಡಿ: ಬೆಂಗಳೂರು ನಲ್ಲಿ ಮಾ.29 ನಡೆದ 3ನೇ ಕೆಜಿಎಫ್ಐ ಗೋಜು-ರ್ಯೂ ಕರಾಟೆ ರಾಜ್ಯ ಮಟ್ಟದ ಆಯ್ಕೆ ಮತ್ತು ಟೂರ್ನಮೆಂಟ್ನಲ್ಲಿ ನೆಲ್ಯಾಡಿಯ ಜ್ಞಾನೋದಯ ಬೆಥನಿ ಪಿಯು ಕಾಲೇಜಿನ ಒಟ್ಟು 45 ಮಂದಿ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಮುಂಬೈ ಅಂಧೇರಿಯಲ್ಲಿ ಮೇ 1ರಿಂದ 3ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಗೋಜು-ರ್ಯೂ ಕರಾಟೆ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಮೊಹ್ ಶಾನಿ ಕಟಾದಲ್ಲಿ ಪ್ರಥಮ ಸ್ಥಾನ ಪಡೆದರೆ, ಫಾತಿಮಾ ರುಫೈದಾ ಕಟಾ ಹಾಗೂ ಕುಮಿತೆ ಎರಡರಲ್ಲೂ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಶ್ರೀಜಾ ಗೌಡ, ಜಿಯಾ ಕಟಿಜಾ, ಶಾನ್ವಿತ್, ಮನ್ವಿತ್ ಕುಮಾರ್ ಯು ಕುಮಿತೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಶ್ರವಣ್ ಜಿ, ಅದ್ವಿಕ್, ಫಾತಿಮತ್ ಫಾಶಿಲಾ, ಭವಿತ್, ಅದ್ವಿತಾ ಕೆ, ಮೊನಿಶ್, ಸೂರ್ಯ ದೀಪ್ ಜೆ.ಕೆ ಹಾಗೂ ಐಷಾ ಅಫ್ನಾ ಕುಮಿತೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕಟಾ ವಿಭಾಗದಲ್ಲಿ ಶ್ರೀಜಾ ಗೌಡ, ಅದ್ವಿತಾ ಕೆ, ಅದಿಕ್ಷ್ ಡಿ ಎಸ್, ಅನ್ವಿತಾ ಜೋಸೆಫ್, ಅನಸ್, ಆರಾಧ್ಯ ಕೆ, ಸ್ವಿಥಿನ್ ಎನ್ ವಿನೋದ್, ಕುಶಾಂತ್ ಕುಮಾರ್ ಯು, ಸೈಧಾತ್ರಿ ಶೆಟ್ಟಿ, ಸಂವಿ, ಮಹಮ್ಮದ್ ನೌಫಲ್, ಸಮಕ್ಷ್ ಎ, ನಕ್ಷತ್ರ, ವೈಭವ್ ಕೆ, ರಿಷಿಕ್ ಪಿ ಎಸ್, ರಕ್ಷನ್ ಕೆ, ವರ್ಣಿತ್ ಪಿ ವಿ, ಅಹ್ಮದ್ ಮಿಡ್ಲಾಜ್, ಸದ್ವಿನ್, ರಿಷಾಂಕ್ ರೈ, ದವನ್ ಎಚ್, ಮೊಹ್ ಆಯಾನ್, ವರ್ಣಿಕಾ, ಮನ್ವಿತ್ ಕುಮಾರ್ ಯು ತೃತೀಯ ಸ್ಥಾನ ಪಡೆದಿದ್ದಾರೆ.
ಕುಮಿತೆ ವಿಭಾಗದಲ್ಲಿ ಅದ್ವಿಕ್, ಆರ್ಯನ್ ಜೈನ್, ಅದಿಕ್ಷ್ ಡಿ ಎಸ್, ಅನಸ್, ಮೊಹಮ್ಮದ್ ಹಿಶಾಮ್, ಆರಾಧ್ಯ ಕೆ, ಕುಶಾಂತ್ ಕುಮಾರ್ ಯು, ಅಲೆನ್ ಪ್ರದೀಪ್, ಅನ್ವಿ ಸಿ ಪಿ, ಸಂವಿ, ಮಹಮ್ಮದ್ ನೌಫಲ್, ನಕ್ಷತ್ರ, ರಿಷಿಕ್ ಪಿ ಎಸ್, ಶ್ರಾವ್ಯ, ಪೂರ್ವಿ ಎಸ್ ಎನ್, ಶ್ರಾವ್ಯ ಕೆ, ವರ್ಣಿತ್ ಪಿ ವಿ, ಚೆರ್ರಿ ಅನ್ನೆಟ್ ರಿಚೆಲ್, ಚಿಂತನ್ ಎ ಆರ್, ಕೌಶಿಕ್, ನಿಹಾನ್, ದವನ್ ಎಚ್, ಮೊಹ್ ಆಯಾನ್ ತೃತೀಯ ಸ್ಥಾನ ಗಳಿಸಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಗೋಜು-ರ್ಯೂ ಕರಾಟೆ ಫೆಡರೇಶನ್ ಟೂರ್ನಮೆಂಟ್ಗೆ ಅರ್ಹತೆ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಕಿ ಅಲ್ಫೋನ್ಸ ಅವರು ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಸಂಸ್ಥೆಯ ಸಂಚಾಲಕ ಹಾಗೂ ಪ್ರಿನ್ಸಿಪಾಲ್ ರೆ. ಫಾ. ಡಾ. ವರ್ಗೀಸ್ ಕೈಪನಡ್ಕ, ಕೋಶಾಧಿಕಾರಿ ಫಾ. ಸ್ಯಾಮುವೆಲ್, ವೈಸ್ ಪ್ರಿನ್ಸಿಪಾಲ್ ಜೋಸ್ ಎಂ.ಜೆ., ಪ್ರೌಢಶಾಲಾ ಮುಖ್ಯಶಿಕ್ಷಕ ಜಾರ್ಜ್ ಕೆ.ಥಾಮಸ್ ಮತ್ತು ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕ ಜೋಸ್ ಪ್ರಕಾಶ್ ಅಭಿನಂದಿಸಿದ್ದಾರೆ.




