ಉಚಿತ ಸಂಸ್ಕಾರ ಬೇಸಿಗೆ ಶಿಬಿರ “ಮಕ್ಕಳ ಕಲರವ” ಗೆ ಚಾಲನೆ

ಶೇರ್ ಮಾಡಿ

 

ಉಚಿತ ಸಂಸ್ಕಾರ ಬೇಸಿಗೆ ಶಿಬಿರ “ಮಕ್ಕಳ ಕಲರವ” ಗೆ ಚಾಲನೆ

ಪುತ್ತೂರು: ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಆಯೋಜಿಸಲಾದ ಉಚಿತ ಸಂಸ್ಕಾರ ಬೇಸಿಗೆ ಶಿಬಿರ “ಮಕ್ಕಳ ಕಲರವ” ಕಾರ್ಯಕ್ರಮಕ್ಕೆ ಪಾಂಗಳಾಯಿ ಅರಸು ಮುಂಡಿತ್ತಾಯ ದೈವಸ್ಥಾನದ ವಠಾರದಲ್ಲಿ ಭರ್ಜರಿ ಚಾಲನೆ ದೊರೆಯಿತು.

ಮೊದಲ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಣೇಶ ಭಟ್ ಕೇರ ಖಂಡಿಗ ಅವರು ದೀಪ ಪ್ರಜ್ವಲನೆಗೈದು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಬೀದಿ ಶ್ವಾನಗಳಿಗೆ ಪ್ರತಿದಿನ ಸ್ವಂತ ಖರ್ಚಿನಲ್ಲಿ ಆಹಾರ ನೀಡುವುದರ ಜೊತೆಗೆ, ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆ ಮಾಡಿಸುತ್ತಿರುವುದಾಗಿ ತಿಳಿಸಿದರು. ಮಕ್ಕಳೂ ತಮ್ಮ ಪೋಷಕರೊಂದಿಗೆ ಹಸಿದ ಪ್ರಾಣಿಗಳಿಗೆ ಆಹಾರ ಮತ್ತು ನೀರು ನೀಡುವ ಮೂಲಕ ಪ್ರಾಣಿ ದಯೆ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದೇವಾಲಯ ಸಂವರ್ಧನಾ ಸಮಿತಿಯ ಜಿಲ್ಲಾಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರು, ಹಿಂದೂ ಧಾರ್ಮಿಕ ಶಿಕ್ಷಣ ತರಗತಿಗಳ ಆರಂಭ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ವಿವರಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಮಕ್ಕಳಾದ ಗರಿಮಾ ಮತ್ತು ತಂಡದವರು ಪ್ರಾರ್ಥಿಸಿದರು. ಹಿಂದೂ ಧಾರ್ಮಿಕ ಶಿಕ್ಷಣ ಪ್ರಕಲ್ಪದ ಸಂಚಾಲಕರಾದ ಕೃಷ್ಣವೇಣಿ ಪ್ರಸಾದ್ ಮುಳಿಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಶ್ಮಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ಉದ್ಘಾಟಕರನ್ನು ಪರಿಚಯಿಸಿದರು. ಪಾಂಗಳಾಯಿ ದೈವಸ್ಥಾನದ ಅಧ್ಯಕ್ಷ ಗೋಪಾಲ ನಾಯಕ್ ಶುಭ ಹಾರೈಸಿದರು.ವೇದಿಕೆಯಲ್ಲಿ ಗಣೇಶ ಭಟ್ ಅವರ ಧರ್ಮಪತ್ನಿ ಪ್ರೀತಿ ಸುಧಾ ಉಪಸ್ಥಿತರಿದ್ದರು. ಪುಸ್ತಕ ಸಮಿತಿಯ ನಿರ್ವಾಹಕರಾದ ಶಂಕರಿ ಶರ್ಮ ವಂದಿಸಿದರು.

ಈ ಸಂದರ್ಭದಲ್ಲಿ ಪುತ್ತೂರು ನಗರಸಭೆಯ ಮಾಜಿ ಉಪಾಧ್ಯಕ್ಷರಾದ ವಿನಯ ಭಂಡಾರಿ ಹಾಗೂ ದೈವಸ್ಥಾನದ ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಬೆಂಬಲ ನೀಡಿದರು. ಶಿಬಿರದಲ್ಲಿ ಬೋಧಕರಾಗಿ ಕೃಷ್ಣವೇಣಿ ಪ್ರಸಾದ್ ಮುಳಿಯ, ಡಾ.ವಿಜಯ ಸರಸ್ವತಿ, ಪ್ರಭಾವತಿ, ಸುಧಾ ಹೆಬ್ಬಾರ್, ಶಂಕರಿ ಶರ್ಮ ಸೇವೆ ಸಲ್ಲಿಸುತ್ತಿದ್ದು, ನಿರ್ವಹಣೆಯಲ್ಲಿ ಪ್ರತಿಮಾ ಸಂಪತ್, ರಶ್ಮಿ ಉಮಾನಾಥ್, ವಿನುತ ಹಾಗೂ ಕ್ಷಮಾ ಸಂತೋಷ್ ಸಹಕರಿಸುತ್ತಿದ್ದಾರೆ.

ಮಾವಿನ ಎಲೆಗಳಿಂದ ಅಲಂಕಾರ, ಮಕ್ಕಳಿಂದ ಸರಳ ಗಣಪತಿ ಪೂಜೆ, ದಿನನಿತ್ಯ ಪಠಿಸುವ ಶ್ಲೋಕಗಳು, ಆಟ-ಪಾಠಗಳ ಮೂಲಕ ಶಿಬಿರವು ವಿಶೇಷವಾಗಿದ್ದು, ಸುಮಾರು 185ಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ಭಾಗವಹಿಸಿದರು.

 

Leave a Reply

error: Content is protected !!