ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಸವಣೂರಿಗೆ ಆಗಮನ-ಭವ್ಯ ಸ್ವಾಗತ

ಶೇರ್ ಮಾಡಿ

 

ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಸವಣೂರಿಗೆ ಆಗಮನ-ಭವ್ಯ ಸ್ವಾಗತ

ಸವಣೂರು: ಹನುಮಗಿರಿ ಶ್ರೀ ಕೋದಂಡ ರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಅಯೋಧ್ಯೆ ಹಾಗೂ ಆಂಜನಾದ್ರಿಯಿಂದ ಹೊರಟ ಶ್ರೀರಾಮ–ಹನುಮ ಜ್ಯೋತಿ ರಥಯಾತ್ರೆಯು ಏ.6ರಂದು ಬೆಳಿಗ್ಗೆ ಸವಣೂರಿಗೆ ಭವ್ಯವಾಗಿ ಆಗಮಿಸಿತು.

ಸವಣೂರು ಜಿನ ಬಸದಿಯ ಪ್ರವೇಶ ದ್ವಾರದಲ್ಲಿ ರಥಯಾತ್ರೆಗೆ ಪುಷ್ಪಾರ್ಚನೆಯೊಂದಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ಪೂರ್ಣಕುಂಭ, ಭಜನೆ, ಮಂಗಳವಾದ್ಯ ಹಾಗೂ ಚೆಂಡೆ ನಾದಗಳೊಂದಿಗೆ ರಥಯಾತ್ರೆ ಜಿನ ಬಸದಿಗೆ ಸಾಗಿತು. ಜಿನ ಬಸದಿಯ ಅರ್ಚಕರಾದ ಶ್ರೇಯಾಂಸ್ ಕುಮಾರ್ ಇಂದ್ರ ಅವರು ರಥಕ್ಕೆ ಆರತಿ ಬೆಳಗಿಸಿ ಪೂಜೆ ಸಲ್ಲಿಸಿದರು. ಬಳಿಕ ಜಿನ ಬಸದಿಗೆ ಬಂದು ಪದ್ಮಾವತಿ ದೇವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರು ಹಾಗೂ ಕೋಟಿ ಶ್ರೀರಾಮ ತಾರಕ ಜಪಯಜ್ಞದ ಸಂಚಾಲಕರಾದ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ಬ್ರಹ್ಮಕಲಶೋತ್ಸವದ ಮಹತ್ವ ಮತ್ತು ಕಾರ್ಯಕ್ರಮದ ವಿವರಗಳನ್ನು ತಿಳಿಸಿದರು. ಅವರನ್ನು ಸವಣೂರು ಗ್ರಾಮ ಸಮಿತಿ ವತಿಯಿಂದ ದೇವಿಯ ಪ್ರಸಾದ ಹಾಗೂ ಶಾಲು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾಮ ಸಮಿತಿಯ ಅಧ್ಯಕ್ಷರಾದ ಮಹೇಶ್ ಕೆ ಸವಣೂರು, ಪ್ರಧಾನ ಕಾರ್ಯದರ್ಶಿ ತಾರನಾಥ ಕಾಯರ್ಗ, ಜಪಯಜ್ಞ ಸಮಿತಿಯ ಸಂಚಾಲಕರಾದ ಗಿರಿಶಂಕರ ಸುಲಾಯ, ಸಹಸಂಚಾಲಕರಾದ ಭರತ್ ರೈ ಪಾಲ್ತಾಡಿ, ಲಿಂಗಪ್ಪ ರೈ ಚೆಂಬುತ್ತೋಡಿ, ರಥಯಾತ್ರಾ ಸಮಿತಿಯ ಸಂಚಾಲಕರಾದ ಚೇತನ್ ಕುಮಾರ್ ಕೋಡಿಬೈಲು, ಸಹಸಂಚಾಲಕರಾದ ಪ್ರಭಾಕರ ಶೆಟ್ಟಿ ನಡುಬೈಲು, ಸಾಮಾಜಿಕ ಜಾಲತಾಣದ ಸಂಚಾಲಕರಾದ ಸತೀಶ್ ಬಲ್ಯಾಯ, ಲಕ್ಷೋತ್ತರ ನಾರಿಕೇಳ ಗ್ರಾಮ ಸಂಚಾಲಕರಾದ ಗಂಗಾಧರ ಪೆರಿಯಡ್ಕ, ಪುಟ್ಟಣ್ಣ ಗೌಡ ಬದಿಯಡ್ಕ, ರಾಮಕೃಷ್ಣ ಪ್ರಭು, ಭಜನಾ ಸಮಿತಿಯ ಸಂಚಾಲಕರಾದ ರಾಜೇಶ್ ಇಡ್ಯಾಡಿ, ಸಹಸಂಚಾಲಕರಾದ ಶಿವರಾಮ ಗೌಡ ಮೆದು, ಮಹಿಳಾ ಸಮಿತಿಯ ಆಶಾ ರೈ ಕಲಾಯಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದಲ್ಲದೆ ಸುರೇಶ್ ರೈ ಸೂಡಿಮುಳ್ಳು, ವಾಸುದೇವ ಇಡ್ಯಾಡಿ, ವೆಂಕಪ್ಪ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ, ತೀರ್ಥರಾಮ ಕೆಡೆಂಜಿ, ಹರಿಕಲಾ ರೈ ಕುಂಜಾಡಿ, ರಾಜೀವಿ ರೈ, ರಾಜೇಶ್ ರೈ ಮೊಗರು, ಬಾಳಪ್ಪ ಪೂಜಾರಿ, ಸಂಜೀವ ಗೌಡ, ಜಯರಾಮ ರೈ, ಜಗದೀಶ್ ಇಡ್ಯಾಡಿ, ಡಾ. ಸುಬ್ರಹ್ಮಣ್ಯ ಭಟ್, ನಾರಾಯಣ ಗೌಡ, ವಿಠಲ ಶೆಟ್ಟಿ, ಸುಪ್ರೀತ್ ರೈ, ಕೀರ್ತನ್ ಕೋಡಿಬೈಲು, ಗಂಗಾಧರ ಸುಣ್ಣಾಜೆ, ಶ್ರೀಧರ ಸುಣ್ಣಾಜೆ, ಚಂದ್ರಶೇಖರ ಮೆದು, ಅನ್ನಪೂರ್ಣಪ್ರಸಾದ್ ಬೈಲಾಡಿ, ಸೂರಪ್ಪ ಗೌಡ, ಬಾಬು ಗೌಡ, ಆನಂದ ಇಡ್ಯಾಡಿ, ಬಾಲಚಂದ್ರ ರೈ, ಜಯರಾಮ ರೈ, ಲೋಕಯ್ಯ ಗೌಡ, ದುರ್ಗಾಪ್ರಸಾದ್, ಪ್ರಕಾಶ್ ಮಾಲೆತ್ತಾರು, ದಯಾನಂದ ಮೆದು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

 

Leave a Reply

error: Content is protected !!