
ಬಂಟ್ವಾಳ: ಗೂಡ್ಸ್ ರಿಕ್ಷಾ ಹಾಗೂ ದ್ವಿಚಕ್ರವಾಹನ ನಡುವೆ ನಡೆದ ಅಪಘಾತಕ್ಕೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಾಜೆ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ.
ಇರಾ ಗ್ರಾಮದ ಕುಕ್ಕಾಜೆಬೈಲು ನಿವಾಸಿ ಅಶೋಕ ಎಂಬವರ ಪುತ್ರ ಮನೀಶ್ ( 26) ಮೃತಪಟ್ಟ ಯುವಕ. ಮಂಚಿಯ ಶಾಮಿಯಾನವೊಂದರಲ್ಲಿ ಉದ್ಯೋಗ ನಡೆಸುತ್ತಿದ್ದ ಈತ ಬೈಕ್ ನಲ್ಲಿ ಸಂಚರಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮಂಚಿಯಿಂದ ಕುಕ್ಕಾಜೆ ಕಡೆಗೆ ಬೈಕ್ ನಲ್ಲಿ ಸಹಸವಾರನಾಗಿ ತೆರಳುತ್ತಿದ್ದಾಗ ಕುಕ್ಕಾಜೆ ಮುಖ್ಯ ರಸ್ತೆಯ ಮಸೀದಿ ಬಳಿ ಎದುರಿನಿಂದ ಬಂದ ರಿಕ್ಷಾ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊರ್ವ ಗಾಯಾಳುವಾಗಿ ಆಸ್ಪತ್ರೆ ಸೇರಿದ್ದಾರೆ.
ಮೃತರು ತಂದೆ ಹಾಗೂ ಅಕ್ಕನನ್ನು ಅಗಲಿದ್ದಾರೆ.









