ನೆಲ್ಯಾಡಿ ಜೆಸಿಐ ವತಿಯಿಂದ 14 ದಿನಗಳ ಯೋಗ ಶಿಬಿರ ಸಮಾರೋಪ; ಯೋಗ ಶಿಕ್ಷಕರಿಗೆ ಸನ್ಮಾನ

ಶೇರ್ ಮಾಡಿ

 

ನೆಲ್ಯಾಡಿ: ಜೆಸಿಐ ನೆಲ್ಯಾಡಿ ವತಿಯಿಂದ ಆಯೋಜಿಸಲಾದ 14 ದಿನಗಳ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭವು ಮೇ 17ರಂದು ನೆಲ್ಯಾಡಿಯ ಸಂತ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ವಹಿಸಿದ್ದರು. ಎರಡು ವಾರಗಳಿಂದ ಶಿಬಿರದಲ್ಲಿ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕರಾದ ಡಾ.ಅನೀಶ್ ಕುಮಾರ್, ಪ್ರಥಮ್ ಕುಮಾರ್ ಹಾಗೂ ಮುರಳಿ ಮೋಹನ್ ಅವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜೆಸಿಐ ನೆಲ್ಯಾಡಿ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ, ಲೇಡಿ ಜೆಸಿ ಅಧ್ಯಕ್ಷೆ ನವ್ಯಪ್ರಸಾದ್, ಯೋಜನಾ ನಿರ್ದೇಶಕ ದೇವಿಪ್ರಸಾದ್ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹ್ನವಿ ಕಾರ್ಯಕ್ರಮ ನಿರೂಪಿಸಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಲೀಲಾ ಮೋಹನ್ ಅವರು ಜೆಸಿ ವಾಣಿ ವಾಚಿಸಿದರು. ಜೊತೆ ಕಾರ್ಯದರ್ಶಿ ಸುಪ್ರಿತಾ ರವಿಚಂದ್ರ ವಂದಿಸಿದರು.

ಶಿಬಿರದಲ್ಲಿ ಭಾಗವಹಿಸಿದ್ದ ಪುರಂದರ ಗೌಡ ಹಾಗೂ ರತಿಲತಾ ಅವರು ಯೋಗದಿಂದ ತಮ್ಮ ಜೀವನದಲ್ಲಿ ಉಂಟಾದ ಆರೋಗ್ಯಕರ ಬದಲಾವಣೆಗಳು ಹಾಗೂ ಅನುಭವಗಳನ್ನು ಹಂಚಿಕೊಂಡರು.

ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳು, ಜೆಸಿಐ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

 

Leave a Reply

error: Content is protected !!