ನೆಲ್ಯಾಡಿ: ಬೆಥನಿ ಕಾಲೇಜಿನ ಪೂರ್ವಪ್ರಾಥಮಿಕ ಮಕ್ಕಳ ಸಂಗಮ ಹಾಗೂ ಪದವಿ ಪ್ರಧಾನ ಸಮಾರಂಭ

ಶೇರ್ ಮಾಡಿ

ನೇಸರ ಮಾ.23: ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಸಂಗಮ ಹಾಗೂ ಪದವಿ ಪ್ರದಾನ ಕಾರ್ಯಕ್ರಮ ಬಹಳ ವಿದ್ಯುಕ್ತವಾಗಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿಸ್ಟರ್ ಸಿಲ್ವಿಯಾ ಎಸ್ಐಸಿ ಯವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪದವಿ ಸಂಕೇತ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಿ, ಶುಭಹಾರೈಸಿದರು. ಪುಟಾಣಿಗಳನ್ನು ಸಂಸ್ಥೆಯ ಸಂಚಾಲಕರಾದ ರೇ.ಫಾ.ಸತ್ಯನ್ ತೋಮಸ್ ಒಐಸಿ ಯವರು ಆಶೀರ್ವದಿಸಿದರು. ರೇ.ಫಾ.ಜಾರ್ಜ್, ರೇ.ಫಾ.ವರ್ಗೀಸ್ ಕೈಪನಡ್ಕ, ಕಾರ್ಯಕ್ರಮವನ್ನು ವೀಕ್ಷಿಸಿದರು. ಕಾಲೇಜಿನ ಪ್ರಾಂಶುಪಾಲರಾದ ರೇ.ಫಾ.ತೋಮಸ್ ಬಿಜಿಲಿ ಒಐಸಿ, ಉಪಪ್ರಾಂಶುಪಾಲರಾದ ಜೋಸ್ ಎಂ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಪುಟಾಣಿಗಳು, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಪುಟಾಣಿ ಜೊವಾನ ಮಾಡ್ತ ಸ್ವಾಗತಿಸಿದರು. ಪುಟಾಣಿ ಮೆಲ್ ರಿಯಾ ವಂದಿಸಿದರು, ಪುಟಾಣಿ ಗಳಾದ ಒಲಿವಿಯಾ ಜೋಸೆಫ್, ಡಾನಿಯೇಲ್ ಜೋನ್ ಡೆನ್ನಿಸ್, ನವೀನ್ ಕುರಿಯಕೊಸ್, ದಿಯಾ, ಗಾಡ್ವಿನ್ ವರ್ಗೀಸ್ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ Subscribers ಮಾಡಿ

—ಜಾಹೀರಾತು—

Leave a Reply

error: Content is protected !!