







ನೆಲ್ಯಾಡಿ: ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆಎಂ) ಉಪ್ಪಿನಂಗಡಿ ರೇಂಜ್-140ರ ವತಿಯಿಂದ ಹೊಸಮಜಲು ಹಿಮಾಯತುಲ್ ಇಸ್ಲಾಂ ಮದ್ರಸದಲ್ಲಿ ರೇಂಜ್ ಕಾನ್ಫರೆನ್ಸ್ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಜೆಎಂ ಉಪ್ಪಿನಂಗಡಿ ರೇಂಜ್ ಅಧ್ಯಕ್ಷ ಡಿ.ಎಚ್. ಇಬ್ರಾಹಿಂ ಸಅದಿ ನೆಕ್ಕಿಲಾಡಿ ವಹಿಸಿದ್ದರು. ಸತ್ತಾರ್ ಹಿಶಾಮಿ ಉಸ್ತಾದ್ ಪವಿತ್ರ ಕುರ್‌ಆನ್ ಪಠಣ ನೆರವೇರಿಸಿದರು. ಹೊಸಮಜಲು ಖತೀಬ್ ಮುಹಮ್ಮದ್ ಶಂಸೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಹಮ್ಮದ್ ರಫೀಖ್ ಅಹ್ಸನಿ ನೆಕ್ಕಿಲಾಡಿ ಅವರು 6ನೇ ತರಗತಿಯ ತಝ್ಕಿಯಾ ಪಾಠ-5ರ ಕುರಿತು ಮಾದರಿ ತರಗತಿ ನಡೆಸಿಕೊಟ್ಟರು. ಇಸ್ಮಾಯಿಲ್ ಸಅದಿ ನೆಲ್ಯಾಡಿ ಅವರು 8ನೇ ತರಗತಿಯ ತಝ್ಕಿಯಾ ಪಾಠ-4ರ ಕುರಿತು ಪಾಠ ಚರ್ಚೆ ನಡೆಸಿದರು.
9ನೇ ತರಗತಿಯ ದುರೂಸ್-1, 2 ಮತ್ತು 3 ಪಾಠಗಳನ್ನು ಆಧರಿಸಿ ಕ್ವಿಝ್ ಸ್ಪರ್ಧೆಯನ್ನು ಶರೀಫ್ ಸಅದಿ ನೆಕ್ಕಿಲಾಡಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮುಹಮ್ಮದ್, ಎಂ.ಕೆ. ಇಬ್ರಾಹಿಂ ಹಾಗೂ ಇಬ್ರಾಹಿಂ ಖಲೀಲ್ ಉಸ್ತಾದ್ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದರು.
ಅಬ್ದುಲ್ ಲತೀಫ್ ಸಖಾಫಿ ಕರ್ವೇಲ್ ಅವರು “ಹೊಸ ವರ್ಷ – ಹೊಸ ಹರುಷ” ವಿಷಯದ ಕುರಿತು ಪ್ರಬಂಧ ಮಂಡಿಸಿ ಗಮನ ಸೆಳೆದರು. ಮುಹಮ್ಮದ್ ರಾಶೀದ್ ಮದನಿ ನೆಲ್ಯಾಡಿ ಸುದ್ದಿ ವಾಚನ ನಡೆಸಿದರೆ, ಅನ್ಸಿಫ್ ಸಅದಿ ಮೊರಂಕಳ ಆಲಾಪನೆಯ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ರೇಂಜ್ ವ್ಯಾಪ್ತಿಯ ಮುಅಲ್ಲಿಮರು ಹಾಗೂ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಉಸ್ತಾದರಿಗಾಗಿ ಹೊಸಮಜಲು ಊರಿನವರ ವತಿಯಿಂದ ವಿವಿಧ ಸಿಹಿತಿಂಡಿಗಳು, ಉಪಹಾರ ಹಾಗೂ ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಯಶಸ್ಸಿಗೆ ಹೊಸಮಜಲು ಆಡಳಿತ ಸಮಿತಿಯು ಸಂಪೂರ್ಣ ಸಹಕಾರ ನೀಡಿದರು.ಫಿರೋಝ್ ಸಅದಿ ಸ್ವಾಗತಿಸಿದರು. ಅಬ್ದುಲ್ ಜಬ್ಬಾರ್ ಝೈನಿ ಕರ್ವೇಲು ವಂದಿಸಿದರು.



