







ಕಡಬ: ಆಲಂಕಾರು ವಲಯದ ಭಜನಾ ಪರಿಷತ್ ಸಭೆಯು ಕುಂತೂರು ಶ್ರೀ ಶಾರದಾ ಭಜನ ಮಂಡಳಿಯಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕಿನ ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಒಗ್ಗು ಅವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಶ್ರೀ ಶಾರದಾ ಭಜನ ಮಂಡಳಿಯ ಗೌರವಾಧ್ಯಕ್ಷ ನಾಗಪ್ಪ ಗೌಡ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ವಲಯ ಮೇಲ್ವಿಚಾರಕರು ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ಆಲಂಕಾರು ವಲಯ ಭಜನಾ ಪರಿಷತ್ನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಹರೀಶ್ ಮುಂಡಾಳ, ಉಪಾಧ್ಯಕ್ಷರಾಗಿ ಚಂದ್ರಶೇಖರ್ ಗೌಡ, ಕಾರ್ಯದರ್ಶಿಯಾಗಿ ಸರೋಜಾ ಮಾಯಿಲ್ ಹಾಗೂ ಕೋಶಾಧಿಕಾರಿಯಾಗಿ ಉಮೇಶ್ ಗೌಡ ಆಯ್ಕೆಯಾದರು.
ಭಜನಾ ಪರಿಷತ್ತಿನ ಚಟುವಟಿಕೆಗಳು, ಸಂಘಟನಾ ಬಲವರ್ಧನೆ ಹಾಗೂ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು.
ಪ್ರೇಮ ಸ್ವಾಗತಿಸಿದರು. ಸವಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸೇವಾ ಪ್ರತಿನಿಧಿಗಳಾದ ಕವಿತಾ ಹಾಗೂ ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



