ಕೊಕ್ಕಡ: ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರ

ಶೇರ್ ಮಾಡಿ

ನೇಸರ ಮಾ.24: ಕೊಕ್ಕಡ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ ಹಾಗೂ ಕ್ಯಾಂಪ್ಕೋ ಹಾಗೂ ಸಾಯ ಎಂಟರ್ ಪ್ರೈಸಸ್ ಪುತ್ತೂರು ಇವರ ಸಹಯೋಗದೊಂದಿಗೆ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರ ಕಾರ್ಬನ್ ಫೈಬರ್ ದೋಟಿಯಲ್ಲಿ ಕೊಯ್ಲು ಮತ್ತು ಔಷಧಿ ಸಿಂಪಡಣೆ ತರಬೇತಿ ಶಿಬಿರ ಸಂಘದ ಅಧ್ಯಕ್ಷ ಕುಶಾಲಪ್ಪಗೌಡ ಇವರ ಅಡಿಕೆ ತೋಟದಲ್ಲಿ ಇಂದು(ಮಾ.24) ರಂದು ಜರುಗಿತು. ತರಬೇತಿ ಶಿಬಿರದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಕುಶಾಲಪ್ಪಗೌಡ ಪೂವಾಜೆ ಇವರು ನಡೆಸಿದರು.

ಸಂಘದ ಉಪಾಧ್ಯಕ್ಷರು ಈಶ್ವರ ಭಟ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ ಹಾಗೂ ತರಬೇತುದಾರರಾದ ಆರ್ ಜಿ ಹೆಗಡೆ, ರಮೇಶ್ ಭಟ್ , ಸಾಯ ಎಂಟರ್ಪ್ರೈಸಸ್ ಪದ್ಮನಾಭ ಗೌಡ ಅವರು ಉಪಸ್ಥಿತರಿದ್ದರು.
ಕುಮಟಾದ ಮೂರೂರು ಕಲ್ಲಬ್ಬೆ ಗ್ರಾಮದ ಆರ್ ಜಿ ಹೆಗಡೆ ಹಾಗೂ ರಮೇಶ್ ಭಟ್ ಇವರು ಕಾರ್ಬನ್ ಫೈಬರ್ ದೋಟಿಯಲ್ಲಿ ಅಡಿಕೆ ಮರಕ್ಕೆ ಔಷಧಿ ಸಿಂಪಡಣೆ ಹಾಗೂ ಅಡಿಕೆ ಕೊಯ್ಲು ಮಾಡುವ ಬಗ್ಗೆ ಶಿಬಿರಾರ್ಥಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸೂಕ್ತವಾದ ವಿವರಣೆಯೊಂದಿಗೆ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ತರಬೇತಿ ಶಿಬಿರದಲ್ಲಿ ರೈತರು ಆಸಕ್ತಿಯಿಂದ ಪಾಲ್ಗೊಂಡು ಫೈಬರ್ ದೋಟಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.ಕೊಕ್ಕಡ, ಪಟ್ರಮೆ, ಕೌಕ್ರಾಡಿ ಹಾಗೂ ಇನ್ನೂ ಕೆಲವು ಗ್ರಾಮಗಳಿಂದ ರೈತರು, ಕೃಷಿಕರು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಾತ್ಯಕ್ಷಿಕೆಯ ನಂತರ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡದ ನಿರ್ದೇಶಕರುಗಳು, ಸಿಬ್ಬಂದಿಗಳು ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿದರು.

ವೀಕ್ಷಿಸಿ Subscribers ಮಾಡಿ

—ಜಾಹೀರಾತು—

Leave a Reply

error: Content is protected !!