ಕುಂತೂರು: ಕಂಡೊಡೊಂಜಿ ದಿನ ಸಂಭ್ರಮ: ಹಿರಿಯ ದೈವ ನರ್ತಕರಿಗೆ ಸನ್ಮಾನ

ಶೇರ್ ಮಾಡಿ

 

ಕುಂತೂರು: ಕಂಡೊಡೊಂಜಿ ದಿನ ಸಂಭ್ರಮ: ಹಿರಿಯ ದೈವ ನರ್ತಕರಿಗೆ ಸನ್ಮಾನ

ಕುಂತೂರು: ತುಳುನಾಡಿನ ಕೃಷಿ ಸಂಸ್ಕೃತಿ, ಗ್ರಾಮೀಣ ಕ್ರೀಡೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಉದ್ದೇಶದಿಂದ ತುಳುನಾಡ ತುಡರ್ ಕುಂತೂರು–ಪೆರಾಬೆ ಆಶ್ರಯದಲ್ಲಿ 4ನೇ ವರ್ಷದ “ಕಂಡೊಡೊಂಜಿ ದಿನ” ಕಾರ್ಯಕ್ರಮವು ಕೊಂತ್ರಮಜಲು ಬಾಬು ಗೌಡ ಅವರ ಬಾಕಿಮಾರು ಗದ್ದೆಯಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.

ಕಾರ್ಯಕ್ರಮಕ್ಕೆ ತುಳುನಾಡ ತುಡರ್ ಕುಂತೂರು–ಪೆರಾಬೆ ಅಧ್ಯಕ್ಷ ಮೇಘನಾಥ ಬಲತ್ತನೆ ಶುಭ ಹಾರೈಸಿದರು. ಸಭಾ ಕಾರ್ಯಕ್ರಮವನ್ನು ಗದ್ದೆಯ ಮಾಲೀಕರಾದ ಬಾಬು ಗೌಡ ಹಾಗೂ ಅವರ ಧರ್ಮಪತ್ನಿ ಪುಷ್ಪ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕ್ರೀಡಾಕೂಟಕ್ಕೆ ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕರ ಗುರುಪ್ರಸಾದ್ ನಿಡ್ವಣಾಯ ಶ್ರೀ ನಿಲಯ ಅರ್ಬಿ ಅವರು ಗದ್ದೆಗೆ ಹಾಲು ಎರೆಯುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಅಲಂಕಾರು ಪ್ರಾ.ಕೃ.ಪ.ಸ.ಸ.ನಿ. ಅಧ್ಯಕ್ಷರ ರಮೇಶ್ ಉಪ್ಪಂಗಳ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರು ಯಮುನಾ ಎಸ್. ರೈ ಗುತ್ತುಪಾಲು, ಉದ್ಯಮಿ ಪ್ರಕಾಶ್ ಶೆಟ್ಟಿ ಪಟ್ಟೆಗುತ್ತು ಮುಂಬೈ, ಉದ್ಯಮಿ ಲೋಕೇಶ್ ಮುಳ್ಳಮಜಲು ಬೆಂಗಳೂರು ಹಾಗೂ ಕುಂತೂರು ಗ್ರಾಮ ಆಡಳಿತಾಧಿಕಾರಿ ಗಿರೀಶ್ ಭಾಗವಹಿಸಿ ಶುಭಾಶಯ ಕೋರಿದರು.

ಅಂತರ್‌ರಾಜ್ಯ ಕಬಡ್ಡಿ ಕ್ರೀಡಾಪಟು ಹಾಗೂ ಬೆಥನಿ ಹೈಸ್ಕೂಲ್ ಪುತ್ತೂರು ವಿದ್ಯಾರ್ಥಿನಿ ಕುಮಾರಿ ಧನ್ಯಶ್ರೀ ಅರ್ಬಿ ಹಾಗೂ ತಂಡದವರು ಕ್ರೀಡಾ ಜ್ಯೋತಿಯನ್ನು ಗದ್ದೆಯ ಸುತ್ತ ತಂದು ಗ್ರಾಮ ಆಡಳಿತಾಧಿಕಾರಿ ಗಿರೀಶ್ ಅವರಿಗೆ ಹಸ್ತಾಂತರಿಸಿದರು. ಬಳಿಕ ದೀಪ ಪ್ರಜ್ವಲನೆ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಮಾನ್ವಿ ಪ್ರಾರ್ಥಿಸಿದರು,ಪ್ರಭಾಕರ್ ಶೆಟ್ಟಿ ಸ್ವಾಗತಿಸಿದರು. ಸತೀಶ್ ಪೂಂಜ ವರದಿ ವಾಚಿಸಿದರು. ಗೀತಾ ವಂದಿಸಿದರು. ಚೆನ್ನಕೇಶವ ರೈ ಗುತ್ತುಪಾಲು ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಹಿರಿಯ ದೈವ ನರ್ತಕರಾದ ಚೆನ್ನ ಅಜಲಯ ನೆಲ್ಲಜಾಲು ಅವರನ್ನು ತುಳುನಾಡ ತುಡರ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಂಜೆ ನಡೆದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕ ರಾಮಣ್ಣ ಗೌಡ ಪರಾರಿ ವಹಿಸಿದರು. ಮುಖ್ಯ ಅತಿಥಿಗಳಾಗಿ ನವೀನ್ ಉಪಾಧ್ಯಾಯ ಅರ್ಬಿ, ಕುಂತೂರು–ಪೆರಾಬೆ ಶಾರದಾಂಬ ಸ್ಪೋರ್ಟ್ಸ್ ಕ್ಲಬ್ ಯೋಗೀಶ್ ಮಾಪಲ, ಮೋಹನ್ ದಾಸ್ ಪರಾರಿ, ವಿನೋದ್ ರೈ ಮನವಳಿಕೆ, ಬಾಲಕೃಷ್ಣ ಸಾರಕೆರೆ, ಮಾಧವ ಶಾಂತಿಗುರಿ, ಸುಧಾಕರ ಬಲತ್ತನೆ, ಸುರೇಶ್ ಕುಂಡಡ್ಕ ಹಾಗೂ ಪದ್ಮನಾಭ ಗೌಡ ಎರ್ಮಾಳ ಭಾಗವಹಿಸಿ ಶುಭ ಹಾರೈಸಿದರು.

ಮಮತಾ ಶೆಟ್ಟಿ ಅಂಬರಾಜೆ ಸ್ವಾಗತಿಸಿದರು. ಚೆನ್ನಕೇಶವ ಗುತ್ತುಪಾಲು ವಂದಿಸಿದರು. ಚಂದ್ರಹಾಸ ಕುಂಟ್ಯಾನ ಕಾರ್ಯಕ್ರಮ ನಿರೂಪಿಸಿದರು.

ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ರೀತಿಯ ಗ್ರಾಮೀಣ ಆಟೋಟ ಸ್ಪರ್ಧೆಗಳು ನಡೆದವು. ತುಂತುರು ಮಳೆಯ ನಡುವೆಯೂ ಕ್ರೀಡಾಪಟುಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಸ್ಪರ್ಧೆಗಳಿಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ದೈಹಿಕ ನಿರ್ದೇಶಕ ಗಣೇಶ್ ಹಾಗೂ ಕುಂತೂರು ಮಾರ್ ಇವಾನಿಯಾಸ್ ಆಂಗ್ಲ ಮಾಧ್ಯಮ ಶಾಲೆಯ ಶಾರೀರಿಕ ನಿರ್ದೇಶಕರು ಭರತ್ ಶೆಟ್ಟಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸುರೇಶ್ ಪಡಿಪಂಡ ಹಾಗೂ ಗುರುಕಿರಣ್ ಶೆಟ್ಟಿ ಬಾಲಾಜೆ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು.

 

Leave a Reply

error: Content is protected !!