ಮಹಿಳಾ ಕಾರ್ಮಿಕರ ಸಂಕಷ್ಟವನ್ನು ಅರಿತು ಸಮಾಜದ ಋಣಭಾರ ಇಳಿಸಲು ಸರಕಾರ ದಿಟ್ಟ ಹೆಜ್ಜೆಯಾಗಬೇಕು -ಬಿ.ಎಮ್. ಭಟ್

ಶೇರ್ ಮಾಡಿ

ನೇಸರ ಮಾ.25: 2003ರಲ್ಲಿ ಜಾರಿಗೆ ಬಂದ ಶಾಲಾ ಮಕ್ಕಳಿಗೆ ಬಿಸಿಯೂಟ ನೀಡಲು ತಂದ ಅಕ್ಷರದಾಸೋಹ ಯೋಜನೆಯ ಅಡುಗೆ ಸಿಬ್ಬಂದಿಗಳಾದ ಮಹಿಳಾ ಕಾರ್ಮಿಕರ ಸಂಕಷ್ಟವನ್ನು ಅರಿತು ಅವರ ಬದುಕಿನ ರಕ್ಷಣೆ ಮಾಡಲು ಪೂರಕವಾದ ಕನಿಷ್ಟ ವೇತನ ನೀಡುವ ಮೂಲಕ ಸಮಾಜದ ಋಣಭಾರ ಇಳಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆಯಾಗಬೇಕು ಎಂದು ಹಿರಿಯ ಕಮ್ಯೂನಿಸ್ಟ್ ನಾಯಕ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಕಾರ್ಮಿಕರ ಅಖಿಲ ಭಾರತ ಮುಷ್ಕರ ಯಶಸ್ವಿಗಾಗಿ ಮಾ.25ರಂದು ಪುತ್ತೂರು ತಾಲೂಕು ಆಡಳಿತ ಸೌಧದ ಎದುರು ಅಕ್ಷರದಾಸೋಹ ನೌಕರರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಮಹಿಳೆಯನ್ನು ದೇವತೆಯನ್ನಾಗಿ ಗೌರವಿಸುತ್ತೇವೆ ಎಂದು ಬೊಗಳೇ ಬಿಡುವ ಸರಕಾರಗಳು ದೇವತೆಯನ್ನು ಈ ರೀತಿ ಬದುಕಲೂ ಆಗದ ನಿರ್ಗತಿಕರಂತೆ ಮಾಡುವುದು ಸರಕಾರದ ನಿರ್ಧಾರವೇ ಎಂದು ಪ್ರಶ್ನಿಸಿದ ಅವರು ಒಂದೆಡೆ ಹಿಜಾಬನ್ನು ಮುಂದಿಟ್ಟು ಮಹಿಳೆಯರು ಶಿಕ್ಷಣದ ಹಕ್ಕನ್ನು ಕಸಿಯುತ್ತಿರುವ ಸರಕಾರ, ಇನ್ನೊಂದು ಕಡೆ ಜೀತಾದಾಳುಗಳಂತೆ ಅಕ್ಷರದಾಸೋಹ ನೌಕರನ್ನು ದುಡಿಸುತ್ತಿದ್ದಾರೆ. ಶಾಸಕರ ಮಂತ್ರಿಗಳಿಗೆ ವೇತನ ದುಪ್ಪಟ್ಟು ಏರಿಸಿಕೊಂಡ ಸರಕಾರ, ಬಿಸಿಯೂಟ ನೌಕರರಿಗೆ ಕೇವಲ ರೂ. 1ಸಾವಿರ ವೇತನ ಹೆಚ್ಚಿಸಿ ಕೈತೊಳೆದುಕೊಂಡಿರುವುದು ಸರಕಾರ ಮಹಿಳಾ ವಿರೋದಿ ದೋರಣೆಗೆ ಹಿಡಿದ ಕೈಗನ್ನಡಿ ಎಂದರು. ಇದರ ವಿರುದ್ದ ನಾವೆಲ್ಲ ಸಂಘಟನೆಯನ್ನು ಬಲಪಡಿಸಿ ಜಾತ್ಯಾತೀತ ಮನೋಭಾವದಿಂದ ಸಂವಿಧಾನ ಆಂದೋಲನ ನಡೆಸಬೇಕಿದೆ ಎಂದರು. ದಲಿತ ಹಕ್ಕು ರಕ್ಷಣಾ ಸಮಿತಿಯ ನಾಯಕಿ ಈಶ್ವರಿ ಅವರು ಮಾತನಾಡಿ ಅಕ್ಷರದಾಸೋಹ ನೌಕರರ ಬೇಡಿಕೆಗಳ ಈಡೇರಿಸಲು ಎಲ್ಲಾ ಕಾರ್ಮಿಕ ವರ್ಗ ಸಹಕರಿಸಲು ಅನ್ಯಾಯಕ್ಕೊಳಗಾದ ಕಾರ್ಮಿಕರ ಪರ ಕೆಲಸ ಮಾಡಲು ಮೊದಲು ನಾವು ಸಿದ್ದರಾಗೋಣ ಎಂದರು.

ಅಕ್ಷರದಾಸೋಹ ನೌಕರರ ಸಂಘದ ತಾಲೂಕು ಅದ್ಯಕ್ಷೆ ಸುಧಾ ಎಕ್ಕಡ್ಕ, ಗೌರವಾದ್ಯಕ್ಷೆ ವೇದಾ ಕೊಳ್ತಿಗೆ, ಕಾರ್ಯದರ್ಶಿ ರಂಜಿತ ಮೊದಲಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ವೀಕ್ಷಿಸಿ Subscribers ಮಾಡಿ

—ಜಾಹೀರಾತು—

Leave a Reply

error: Content is protected !!