










ನೆಲ್ಯಾಡಿ: ಪುತ್ತೂರು ತಾಲೂಕು ಶಿವಳ್ಳಿ ಸಂಪದದ 2026–28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯು ಭಾನುವಾರ ಪುತ್ತೂರಿನ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ಸಭಾಭವನದಲ್ಲಿ ತಾಲೂಕು ಸಂಪದದ ಅಧ್ಯಕ್ಷ ಸುಧೀಂದ್ರ ಕುದ್ದಣ್ಣಾಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಎನ್.ಸುಬ್ರಹ್ಮಣ್ಯ ಕೊಳತ್ತಾಯ, ಅಧ್ಯಕ್ಷರಾಗಿ ಸತೀಶ್ ಕೆ.ಎಸ್. ದುರ್ಗಾಶ್ರೀ, ನೆಲ್ಯಾಡಿ, ಉಪಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ನಾಗರಾಜ ನಿಡ್ವಣ್ಣಾಯ, ರಾಮಕೃಷ್ಣ ಉಂಗ್ರುಪುಳಿತ್ತಾಯ ಹಾಗೂ ಪ್ರತಿಭಾ ಓಕುಣ್ಣಾಯ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಬಾಲಚಂದ್ರ ಮುಚ್ಚಿಂತ್ತಾಯ, ಕೋಶಾಧಿಕಾರಿಯಾಗಿ ಕೃಷ್ಣರಾಜ ಎರ್ಕಡಿತ್ತಾಯ, ಜೊತೆ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಕೆ., ಸಂಘಟನಾ ಕಾರ್ಯದರ್ಶಿಯಾಗಿ ರವೀಂದ್ರ ಟಿ. ಹಾಗೂ ಯುವ ಸಂಪದ ಅಧ್ಯಕ್ಷರಾಗಿ ಸುಜಯ್ ತಂತ್ರಿ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ರಂಗನಾಥ ರಾವ್, ಕೆ.ಆರ್.ಆಚಾರ್ಯ, ದಿವಾಕರ ನಿಡ್ವಣ್ಣಾಯ, ಬಾಲಕೃಷ್ಣ ಕಣ್ಣಾರಾಯ, ಸುಧೀಂದ್ರ ಕುದ್ದಣ್ಣಾಯ, ಉದಯ್ ಕುಮಾರ್ ಪಜಿಮಣ್ಣು ಹಾಗೂ ಸುಬ್ರಾಯ ಬೈಪಾಡಿತ್ತಾಯ ಆಯ್ಕೆಯಾಗಿದ್ದು, ಮಾಧ್ಯಮ ವಕ್ತಾರರಾಗಿ ಸತೀಶ್ ಕೆದಿಲಾಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸತೀಶ್ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು. ಶ್ರೀನಿವಾಸ ಕುಂಜೆತ್ತಾಯ ಅವರು ನೀತಿ ಸಂಹಿತೆ ಪಠಿಸಿದರು. ಸುಧೀಂದ್ರ ಕುದ್ದಣ್ಣಾಯ ಸ್ವಾಗತಿಸಿದರು. ಮುಖ್ಯ ಚುನಾವಣಾ ವೀಕ್ಷಕರಾಗಿ ದಿವಾಕರ ನಿಡ್ವಣ್ಣಾಯ ಭಾಗವಹಿಸಿದ್ದು, ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಲಕ್ಷ್ಮೀನಾರಾಯಣ ಕಡಂಬಳಿತ್ತಾಯ ಸಹಕರಿಸಿದರು. ಸಂತೋಷ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.
ಸಭೆಯಲ್ಲಿ ಪುತ್ತೂರು ತಾಲೂಕು ಶಿವಳ್ಳಿ ಸಂಪದದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.



