ಜೇಸಿ ಸಂಸ್ಥೆ ಯುವಜನತೆಯ ವ್ಯಕ್ತಿತ್ವ ನಿರ್ಮಾಣದ ಕೇಂದ್ರ : ಜೇಸಿ.ಡಾ.ಎಂ.ಆರ್.ಶೆಣೈ

ಶೇರ್ ಮಾಡಿ

ನೇಸರ ಎ.01: ಜೇಸಿಐ ಉಪ್ಪಿನಂಗಡಿ ಘಟಕದ ತಿಂಗಳ ಸಾಮಾನ್ಯ ಸಭೆ ಮತ್ತು “ನಮ್ಮ ಪೂರ್ವಾಧ್ಯಕ್ಷರು ನಮ್ಮ ಘಟಕದ ಹೆಮ್ಮೆ” ಅನ್ನುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ 44 ವರ್ಷಗಳ ಹಿಂದೆ ಘಟಕ ಸ್ಥಾಪನೆಯ ಸ್ಥಾಪಕ ಸದಸ್ಯರಾಗಿ ಮತ್ತು 1980 ಮತ್ತು 1981ರ ಸಾಲಿನಲ್ಲಿ ಘಟಕದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಜೇಸಿ.ಡಾ.ಎಂ.ಅರ್. ಶೆಣೈ ,ಶೆಣೈ ಆಸ್ಪತ್ರೆ ಉಪ್ಪಿನಂಗಡಿ ಇವರು ಭಾಗವಹಿಸಿ ‘ಜೇಸಿ ಅನುಭವ ಕಥನ ಕಾರ್ಯಕ್ರಮ’ ದ ಮೂಲಕ ಜೇಸಿ ಸದಸ್ಯರಿಗೆ ಮಾರ್ಗದರ್ಶನ ನೀಡಿ ಜೇಸಿ ಸಂಸ್ಥೆ ಯುವಜನತೆಗೆ ವಿವಿಧ ತರಬೇತಿಗಳಿಗೆ ವೇದಿಕೆ ಕಲ್ಪಿಸಿ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವುಗಳನ್ನು ಯುವ ಸಮೂಹ ಸಮರ್ಥವಾಗಿ ಬಳಸಿಕೊಳ್ಳಲು ಕರೆ ನೀಡಿದರು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ಅವರು ಮಾನವ ಕುಲಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದಮನೆ ವಹಿಸಿದ್ದರು. ಡಾಕ್ಟರ್ ಗೋವಿಂದ ಪ್ರಸಾದ್ ಕಜೆ ಅತಿಥಿಯವರನ್ನು ಪರಿಚಯಿಸಿದರು. ಪೂರ್ವಾಧ್ಯಕ್ಷರಾದ ರವೀಂದ್ರ ದರ್ಬೆ ಮತ್ತು ಜಯಪ್ರಕಾಶ್ ಶೆಟ್ಟಿ, ಪ್ರಶಾಂತ್ ಕುಮಾರ್ ರೈ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಕೆ.ವಿ.ಕುಲಾಲ್, ಕಾರ್ಯಕ್ರಮ ನಿರ್ದೇಶಕರಾದ ಪ್ರಶಾಂತ್ ಕುಮಾರ್ ರೈ ಉಪಸ್ಥಿತರಿದ್ದರು. ಜೇಸಿ ಸದಸ್ಯರ ಕ್ರಿಯಾಶೀಲತೆಯನ್ನು ಪರಿಗಣಿಸಿ ಕಿರು ಕಾಣಿಕೆಯನ್ನು ನೀಡಿ ಪುರಸ್ಕರಿಸಲಾಯಿತು.
ವರ್ಷದ ಶಾಶ್ವತ ಯೋಜನೆಯ ಅಂಗವಾಗಿ ಅಡಿಕೆ ಸಸಿ ಬೆಳೆಸಲು ಕಾರ್ಯಕ್ರಮ ನಿರ್ದೇಶಕರಾದ ಮಹೇಶ್ ಇವರಿಗೆ ಅಡಿಕೆ ವಿತರಿಸಿ ಚಾಲನೆ ನೀಡಲಾಯಿತು. ಪೂರ್ವಾಧ್ಯಕ್ಷರಾದ ವಿಜಯ ಕುಮಾರ್ ಕಲ್ಲಳಿಕೆ, ಆನಂದ ರಾಮಕುಂಜ, ಹರೀಶ್ ನಟ್ಟಿಬೈಲು ಉಮೇಶ್ ಆಚಾರ್ಯ, ಕೇಶವ ರಂಗಾಜೆ, ಶಶಿಧರ್ ನೆಕ್ಕಿಲಾಡಿ, ಉಪಾಧ್ಯಕ್ಷರುಗಳಾದ ಡಾ.ನಿರಂಜನ ರೈ, ಅವನೀಶ್ ಪೆರಿಯಡ್ಕ, ಪ್ರದೀಪ್ ಆಚಾರ್ಯ, ಕೋಶಾಧಿಕಾರಿ ಸುರೇಶ್, ಉಪಸ್ಥಿತರಿದ್ದರು. ದಿವಾಕರ ಶಾಂತಿನಗರ ಜೇಸಿವಾಣಿ ಉದ್ಘೋಷಿಸಿದರು. ಶ್ರೀಮತಿ ಲವಿನಾ ಪಿಂಟೊ ವರದಿ ಮಂಡಿಸಿದರು ಮತ್ತು ಧನ್ಯವಾದ ಸಲ್ಲಿಸಿದರು.

ವೀಕ್ಷಿಸಿ SUBSCRIBERS ಮಾಡಿ

—ಜಾಹೀರಾತು—

 

Leave a Reply

error: Content is protected !!