ಸಾಹಿತ್ಯ ಬದುಕಿನ ಭಾಗವಾಗಿರಲಿ : ರಾಮಕೃಷ್ಣ ಭಟ್ ಬೆಳಾಲು

ಶೇರ್ ಮಾಡಿ

ನೇಸರ ಎ.03: ಶಿಕ್ಷಣ ಇಂದು ಸವಾಲಾಗಿದೆ. ಪರಂಪರಾಗತ ಶಿಕ್ಷಣ ಅಗತ್ಯವಿದೆ. ಸಾಹಿತ್ಯ ಮನುಷ್ಯನನ್ನು ಉನ್ನತ ಸ್ಥಾನಕ್ಕೆ ಒಯ್ಯುತ್ತದೆ. ಮಾನವೀಯ ಸಂಬಂಧಕ್ಕೆ ಸಾಹಿತ್ಯ ಅಗತ್ಯ. ಜೀವಂತಿಕೆಯ ಒರತೆ ನಿತ್ಯ ಹರಿಯಲು ಸಾಹಿತ್ಯ ಬೇಕು ಎಂದು ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು ನುಡಿದರು. ಅವರು ಶಿಶಿಲದ ಶಿವಕೀರ್ತಿ ನಿಲಯದ ಜಯರಾಮ ನೆಲ್ಲಿತ್ತಾಯರ ಮನೆಯಲ್ಲಿ ಜರಗಿದ ಅರಸಿನಮಕ್ಕಿ ವಲಯದ ತುಳು ಶಿವಳ್ಳಿ ಬಾಂಧವರ ವಲಯ ಸಭೆ ಮತ್ತು ದ.ಕ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಅಭಿನಂದನ ಸಭೆಯಲ್ಲಿ ಹೇಳಿದರು.
ಅಭಿನಂದನಾ ಭಾಷಣ‌ಮಾಡಿದ ಶ್ರೀಕೃಷ್ಣ ಆಚಾರ್ಯ ರವರು ಮಾತನಾಡುತ್ತಾ ಶ್ರೀನಾಥ್ ಅವರು ಜಿಲ್ಲಾ ಅದ್ಯಕ್ಷರಾಗಲು ಉತ್ತಮ ವ್ಯಕ್ತಿ. ಬಾಲ್ಯದಿಂದಲೆ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿದವರು ಮತ್ತು ತಮ್ಮ ಅವಿರತ ಶ್ರಮದಿಂದ ಜಿಲ್ಲಾ ಸಾಹಿತ್ಯ ಪರಿಷತ್ತುಗೆ ಬಹಳಷ್ಟು ಕೊಡುಗೆ ನೀಡಿದವರು ಎಂದು ಶುಭ ಹಾರೈಸಿದರು.

ಅಭಿನಂದನೆಗೆ ಉತ್ತರಿಸಿದ‌ ಜಿಲ್ಲಾ ಸಾಹಿತ್ಯ ಪರಿಷತ್ತು ಅದ್ಯಕ್ಷರು ಸಾಹಿತ್ಯ ಪರಿಷತ್ತುಗೆ ತನ್ನ ನಿರಂತರ ಸೇವೆಯನ್ನು ಸ್ಮರಿಸಿದರು ಮತ್ತು ತನ್ನ ಗೆಲುವಿಗೆ ಕಾರಣರಾದವರಿಗೆ‌ ಧನ್ಯವಾದ ತಿಳಿಸಿದರು. ಮುಂದಿನ ದಿನದಲ್ಲಿ ಶಕ್ತಿ ಮೀರಿ ಸಾಹಿತ್ಯ ಪರಿಷತ್ತು ಬೆಳೆಸುವಲ್ಲಿ ಪ್ರಾಮಾಣಿಕ ಸೇವೆ ನೀಡುವುದಾಗಿ ನುಡಿದರು.
ಶಿವಳ್ಳಿ ತಾಲೂಕು ಅದ್ಯಕ್ಷರಾದ ರಾಘವೇಂದ್ರ ಬೈಪಾಡಿತ್ತಾಯರು ಶಿವಳ್ಳಿ ಸಮಾಜ ನಡೆದು ಬಂದ ದಾರಿಯನ್ನು ವಿವರಿಸಿದರು. ತಾಲೂಕು ಕಾರ್ಯದರ್ಶಿ ಪೊಳ್ನಾಯರು ಸಮಾಜದಿಂದ ನಿರ್ಮಾಣ ಆಗುತ್ತಿರುವ ಕಲ್ಯಾಣ ಮಂಟಪ ಅಭಿವೃದ್ಧಿ ಕುರಿತು ವರದಿ ಮಂಡಿಸಿದರು.
ಸಮಾಜದ ಹಿರಿಯರಾದ ಅಡ್ಕಾಡಿ ಶ್ರೀಕರರಾವ್ ಶುಭ ಹಾರೈಸಿದರು. ಸಮಾರಂಭದ ಅದ್ಯಕ್ಷತೆಯನ್ನು ವಲಯ ಅದ್ಯಕ್ಷರಾದ ಪುರಂದರ ಭಟ್ ವಹಿಸಿದ್ದರು. ಮೋಹನ ಉಪಾಧ್ಯಾಯ ಎಲ್ಲರನ್ನೂ ಸ್ವಾಗತಿಸಿದರು. ಬಿ ಜಯರಾಮ ನೆಲ್ಲಿತ್ತಾಯ ಧನ್ಯವಾದ ಸಮರ್ಪಿಸಿದರು.
ಸಭೆಯಲ್ಲಿ ನಾಗೇಶ ರಾವ್ ಮುಂಡ್ರುಪ್ಪಾಡಿ, ಗ್ರಾ.ಪ.ಸದಸ್ಯ ಸುಧೀರ್ ರಾವ್ ಅಡ್ಕಾಡಿ, ಗಿರೀಶ ಭಟ್, ರವಿ ಅಂಗಡಿತೋಟ, ರಾಜ ಗೋಪಾಲ ರಾವ್ ಪೆರೆಡೆಲು, ವಿಶು ಕುಮಾರ್, ಮೋಹನ ನೆಲ್ಲಿತ್ತಾಯ, ರಘು ಭಟ್, ರಮಾನಂದ ರಾವ್, ಪ್ರೇಮಚಂದ್ರ ರಾವ್ ಪೆರ್ಲ, ಸುಬ್ರಹ್ಮಣ್ಯ ರಾವ್, ರಾಧಾಕೃಷ್ಣ ಭಟ್, ಆನಂದ ಕೆದಿಲಾಯ, ಶ್ರೀಪತಿ ನೆಲ್ಲಿತ್ತಾಯ, ಪ್ರಕಾಶ ನೆಲ್ಲಿತ್ತಾಯ, ಮೊದಲಾದವರು ಹಾಜರಿದ್ದರು.

ವೀಕ್ಷಿಸಿ SUBSCRIBERS ಮಾಡಿ

 

—ಜಾಹೀರಾತು—

Leave a Reply

error: Content is protected !!