ಉದನೆ ಸೇತುವೆ ಹೋರಾಟ ಸಮಿತಿಯಿಂದ ಸೇತುವೆ ನಿರ್ಮಾಣಕ್ಕೆ ಕಾರಣಕರ್ತರಾದ ರಮಾನಾಥ ರೈಯವರಿಗೆ ಸನ್ಮಾನ

ಶೇರ್ ಮಾಡಿ

ನೇಸರ ಎ.05: ಉದನೆ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸಿ ಶಿಲಾನ್ಯಾಸ ನೆರವೇರಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕರವರನ್ನು ಉದನೆ ಸೇತುವೆ ಹೋರಾಟ ಸಮಿತಿಯ ವತಿಯಿಂದ ಎ.4ರಂದು ಉದನೆಯಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ರಮಾನಾಥ ರೈಯವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಡವರಿಗೆ ಮನೆ ಕೊಡುವ ಕೆಲಸ ಮಾಡಿತ್ತು. ಇದೀಗ ಬಿಜೆಪಿ ಸರಕಾರ ಬಂದ ಮೇಲೆ ಇಲ್ಲಿಯ ತನಕ ಒಂದೇ ಒಂದು ಮನೆ ಕೊಟ್ಟಿಲ್ಲ ಎಂದರು. ದಿವ್ಯಪ್ರಭಾ ಚಿಲ್ತಡ್ಕ ಮಾಜಿ ಅಧ್ಯಕ್ಷೆ ಸಮಾಜ ಕಲ್ಯಾಣ ಮಂಡಳಿ ರವರು ಸನ್ಮಾನ ಸ್ವೀಕರಿಸಿ ಸಂದರ್ಭೋಚಿತವಾಗಿ ಮಾತನಾಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರುವಲ್ಲಿ ತಾವೆಲ್ಲರೂ ಶ್ರಮ ವಹಿಸಬೇಕು ಎಂದು ಹೇಳಿದರು. ಉದನೆ ಸೇತುವೆ ಹೋರಾಟ ಸಮಿತಿ ಅಧ್ಯಕ್ಷ, ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ದಿವಾಕರ ಗೌಡ ಉದನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಉದನೆ ಸೇತುವೆ ರಚನೆಗೆ ಸಂಬಂಧಿಸಿ 2೦12ರಲ್ಲಿ ಹೋರಾಟ ಸಮಿತಿ ರಚನೆಯಾಗಿದೆ. ಸಿದ್ದರಾಮಯ್ಯರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಗ ಬಿಎಂಟಿಸಿ ಅಧ್ಯಕ್ಷರಾಗಿದ್ದ ನಾಭಿರಾಜ್ ಜೈನ್‌ ರವರ ನೇತೃತ್ವದಲ್ಲಿ ಕೆಆರ್‌ಡಿಸಿಎಲ್‌ಗೆ ಅರ್ಜಿ ಸಲ್ಲಿಸಲಾಗಿತ್ತು. 2017ರಲ್ಲಿ ಸೇತುವೆ ನಿರ್ಮಾಣಕ್ಕೆ ರೂ.9.6೦ ಕೋಟಿ. ಬಿಡುಗಡೆಗೊಂಡಿದ್ದು 2೦18ರಲ್ಲಿ ಬಿ.ರಮಾನಾಥ ರೈಯವರು ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಇದೀಗ ಸೇತುವೆ ನಿರ್ಮಾಣಗೊಂಡು ಸಂಚಾರಕ್ಕೆ ಮುಕ್ತಗೊಂಡಿದೆ. ಸೇತುವೆ ನಿರ್ಮಾಣಕ್ಕೆ ಕಾರಣಕರ್ತರಾದ ರಮಾನಾಥ ರೈಯವರನ್ನು ನೆನಪಿಸಿಕೊಂಡು ಅವರಿಗೆ ಸನ್ಮಾನ ನಡೆಸಲಾಗುತ್ತಿದೆ ಎಂದರು. ಈ ಭಾಗದ ಹಲವು ಯೋಜನೆಗಳಿಗೆ ರಮಾನಾಥ ರೈಯವರು ಅನುದಾನ ಒದಗಿಸಿದ್ದಾರೆ ಎಂದು ಹೇಳಿದರು. ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್‌ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಡಾ.ರಘು ಬೆಳ್ಳಿಪ್ಪಾಡಿ, ಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ತಾ.ಪಂ.ಮಾಜಿ ಸದಸ್ಯರಾದ ಉಷಾ ಅಂಚನ್, ಆಶಾ ಲಕ್ಷ್ಮಣ ಗುಂಡ್ಯ, ಶಿರಾಡಿ ಗ್ರಾ.ಪಂ.ಅಧ್ಯಕ್ಷೆ ವಿನೀತಾ ವಿನಿತಾ ತಂಗಚ್ಚನ್, ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಎಂ.ಕೆ.ಪೌಲೋಸ್, ಸಣ್ಣಿಜಾನ್, ಪ್ರಮುಖರಾದ ಪೂವಪ್ಪ ಕರ್ಕೇರ ಪಾಲೇರಿ, ಸೆಬಾಸ್ಟಿನ್ ಕಳಪ್ಪಾರು, ಶಿವಪ್ಪ ಗೌಡ ಪುತ್ತಿಗೆ, ಮಾಧವ ಪೂಜಾರಿ, ಕೃಷ್ಣಪ್ಪ ಗೌಡ ಪರಾರಿ, ದೇವಿಪ್ರಸಾದ್ ಪರಾರಿ, ವಿಜೇಶ್ ಉದನೆ, ಮಾಧವ ಗೌಡ ಬೆಳ್ಳಾರೆ, ದಯಾನಂದ ಪೂಜಾರಿ ಕಡ್ಯ, ಸತೀಶ್ ಗೌಡ ಕಡ್ಯ, ಗಂಗಾಧರ ಗೌಡ ಬ್ರಂತೋಡ್, ಬಾಲಣ್ಣ ಗೌಡ, ತಿಮ್ಮಪ್ಪ ಗೌಡ, ಓರ್ಕಳ ಬೇಬಿ ಗೌಡ, ಸುಂದರ ಪೂಜಾರಿ, ಜನಾರ್ದನ ಪೂಜಾರಿ, ಪೂವಣಿ ಗೌಡ, ತಿಮ್ಮಪ್ಪ ಗೌಡ ಡಿ.ಆರ್., ಸಣ್ಣಿ ಅಡ್ಡಹೊಳೆ, ಬೆನ್ನಿ ಸೋಣಂದೂರು, ವಸಂತ ಗೌಡ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯೆ ಮೈತ್ರಿ ಕೆಳಗಿನಮನೆ ವಂದಿಸಿದರು.

Leave a Reply

error: Content is protected !!