ಕಾರ್ಯಕ್ರಮಗಳನ್ನು ಆಯೋಜಿಸುವುದೂ ಒಂದು ಕಲೆ – ಡಾ. ಅನುರಾಧಾ ಕುರುಂಜಿ

ಶೇರ್ ಮಾಡಿ

ನೇಸರ ಎ.07: ಪ್ರತಿಯೊಂದು ಕಾರ್ಯಕ್ರಮಗಳಿಗೂ ಅದರದ್ದೇ ಆದ ಆಯಾಮಗಳಿರುತ್ತವೆ. ಕಾರ್ಯಕ್ರಮಗಳನ್ನು ಸಂಘಟಿಸುವುದು, ಆಯೋಜಿಸುವುದು, ನಿರ್ವಹಿಸುವುದೂ ಕೂಡ ಒಂದು ಕಲೆ ಎಂದು ಸುಳ್ಯದ ವಲಯ ತರಬೇತುದಾರರು, ಎನ್ನೆಂಸಿಯ ಕನ್ನಡ ಉಪನ್ಯಾಸ ಕರೂ ಆದ ಡಾ. ಅನುರಾಧಾ ಕುರುಂಜಿಯವರು ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದವರು ಹಮ್ಮಿಕೊಂಡ “ಕಾರ್ಯಕ್ರಮಗಳನ್ನು ಆಯೋಜಿಸುವುದು ಹೇಗೆ?” ಎಂಬ ವಿಷಯದ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮಗಳು ನಿರ್ದಿಷ್ಟವಾದ ಸ್ಥಳದಲ್ಲಿ, ನಿರ್ದಿಷ್ಟವಾದ ಜನರಿಗೆ, ನಿರ್ದಿಷ್ಟವಾದ ವಿಷಯವನ್ನು ತಿಳಿಸುವಂತದು. ಅಂತಹ ಸಂದರ್ಭದಲ್ಲಿ ಅದನ್ನು ಆಯೋಜನೆ ಮಾಡುವಾಗ ಬಹಳಷ್ಟು ಪೂರ್ವ ತಯಾರಿ ಹಾಗೂ ಶ್ರಮ, ಆಸಕ್ತಿ ಅಗತ್ಯ ಎಂದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಘಟಕರಾದ ಅಬ್ದುಲ್ ರಶೀದ್ ಹಾಗೂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ಪ್ರಥಮ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿನಿ ಅಂಕಿತಾ ಕೆ ಜೆ ಸ್ವಾಗತಿಸಿ, ಜಯರಾಜ್ ಶೆಟ್ಟಿ ವಂದಿಸಿದರು. ಪ್ರಥಮ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿನಿಯರಾದ ಪ್ರತಿಮಾ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಮೇಘಾ ಕಾರ್ಯಕ್ರಮ ನಿರೂಪಿಸಿದರು.

ವೀಕ್ಷಿಸಿ SUBSCRIBERS ಮಾಡಿ

—ಜಾಹೀರಾತು—

Leave a Reply

error: Content is protected !!