ಭಾಗವತ ಪ್ರಸಾದ ಬಲಿಪ ವಿಧಿವಶ

ಶೇರ್ ಮಾಡಿ

ನೇಸರ ಎ.11: ಯಕ್ಷಗಾನದ ಖ್ಯಾತ ಭಾಗವತ, ಬಲಿಪ ಪರಂಪರೆಯ ಕೊಂಡಿ ಬಲಿಪ ಪ್ರಸಾದ ಭಾಗವತ(46) ಸೋಮವಾರ ವಿಧಿವಶರಾದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಎರಡನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಅವರು ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸಕ್ತ ವರ್ಷದ ಯಕ್ಷಗಾನ ತಿರುಗಾಟದಲ್ಲಿ ಭಾಗವಹಿಸಿರಲಿಲ್ಲ. ಮೂಡುಬಿದಿರೆ ಮಾರೂರಿನ ನೂಯಿ ಎಂಬಲ್ಲಿ ಜನಿಸಿದ್ದ ಪ್ರಸಾದ ಬಲಿಪರಿಗೆ ಅವರ ತಂದೆ ಬಲಿಪ ನಾರಾಯಣ ಭಾಗವತರೇ ಗುರುವಾಗಿದ್ದರು. 17ರ ಹರೆಯದಲ್ಲೇ ಕಟೀಲು ಮೇಳದಲ್ಲಿ ಭಾಗವತಿಕೆ ಆರಂಭಿಸಿ ಪ್ರಧಾನ ಭಾಗವತರಾಗಿ ಬೆಳೆದಿದ್ದರು.
ಮೂರು ದಶಕಗಳಿಂದ ಪ್ರಸಿದ್ಧ ಬಲಿಪ ಶೈಲಿಯ ಭಾಗವತಿಕೆಯ ಸಾಂಪ್ರದಾಯಿಕ ಶೈಲಿಯನ್ನು ಮುಂದುವರಿಸಿ ಅನೇಕ ಅಭಿಮಾನಿಗಳನ್ನು ಹೊಂದಿದ್ದರು. ಪೌರಾಣಿಕ ಪ್ರಸಂಗಗಳಲ್ಲಿ ಅದ್ಭುತ ಹಿಡಿತ ಹೊಂದಿದ್ದ ಇವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ

Leave a Reply

error: Content is protected !!