ಬಜತ್ತೂರು: ಬಯಲು ಕಸ ಮುಕ್ತ ಗ್ರಾಮ ಅಭಿಯಾನ

ಶೇರ್ ಮಾಡಿ

ನೇಸರ ಎ.13: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವಚ್ಛ ಭಾರತ್ ಮಿಷನ್, ಪುತ್ತೂರು ತಾಲೂಕು ಪಂಚಾಯತ್ ಮತ್ತು ಬಜತ್ತೂರು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಬಯಲು ಕಸಮುಕ್ತ ಅಭಿಯಾನ ಕಾರ್ಯಕ್ರಮವು ಅಂಗನವಾಡಿ ಕೇಂದ್ರ ನೀರಕಟ್ಟೆ ಮತ್ತು ಬೆದ್ರೋಡಿಯಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿಕಾರಿ ಪ್ರವೀಣ್, ಕಾರ್ಯದರ್ಶಿ ಗಿರಿಯಪ್ಪ ಗೌಡ, ಪಂಚಾಯತಿ ಸಿಬ್ಬಂದಿ ರಮೇಶ್ ನೇತೃತ್ವ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತರಾದ ಕಲಾವತಿ, ರವಿಕಲಾ, ಕೋಮಲಾಕ್ಷಿ, ಜೇಸಿಐ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಮೋಹನ್ ಚಂದ್ರ ತೋಟದ ಮನೆ, ಕಾಂಚನ ವಿಕ್ರಮ ಯುವಕ ಮಂಡಲದ ಪೂರ್ವಾಧ್ಯಕ್ಷರಾದ ಕುಶಾಲಪ್ಪ ಮುಖ್ಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತರು, ವಿವಿಧ ಸ್ವಸಹಾಯ ಸಂಘದ ಸದಸ್ಯರು, ಜೇಸಿ ಸದಸ್ಯರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿ ,ವಳಾಲು ಮತ್ತು ನೀರಕಟ್ಟೆ ಸ್ಥಳ ಗಳಲ್ಲಿ ಪ್ಲಾಸ್ಟಿಕ್ ಕಸಕಡ್ಡಿಗಳನ್ನು ಹೆಕ್ಕಿ ಪರಿಸರವನ್ನು ಸ್ವಚ್ಛಗೊಳಿಸಿದರು.

—ಜಾಹೀರಾತು—

Leave a Reply

error: Content is protected !!