
ನೇಸರ ಎ.27: ಉದನೆ ತೂಗು ಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದ್ದರ ಮಾಹಿತಿಯನ್ನು ಪಡೆದ ನೆಲ್ಯಾಡಿ ಹೊರ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಉದನೆಯ ಕಳಪಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಲಸಕ್ಕೆ ಬಂದ ಮೂವರು ಆಂಧ್ರದ ವ್ಯಕ್ತಿಗಳು ಬ್ಯಾಟರಿಯ ಮುಖಾಂತರ ಮೀನನ್ನು ಹಿಡಿದಿದ್ದು ಎಂಬುದಾಗಿ ಮಾಹಿತಿ ಇದ್ದು. ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ತಿಳಿದುಬಂದಿದೆ.
🍁 ಜಾಹೀರಾತು 🍁







