ನೇಸರ ಮೇ 1: ಶಿಶಿಲೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಮೂಡೆತ್ತಾಯರ ಪುತ್ರ ಸೂರ್ಯನಾರಾಯಣ ರಾವ್ (44) ಮೆದುಳು ರಕ್ತಸ್ರಾವದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ನೇರ ನುಡಿಯ ಎಲ್ಲರ ಮೆಚ್ಚಿಗೆಯ “ಸೂರ್ಯಣ್ಣ” ಎಂದೇ ಹೆಸರು ವಾಸಿಯಾಗಿದ್ದ ಇವರು ಹಿಂದುತ್ವ ಮತ್ತು ಧಾರ್ಮಿಕ ವಿಚಾರ, ಸಮಾಜಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಸನಾತನ ಧರ್ಮ ಕಾರ್ಯದತ್ತ ಒಲವು ಹೊಂದಿದ್ದ ಇವರು. ದ.ಕ.ಜಿಲ್ಲೆಯ ನೇತ್ರಾವತಿ ತಿರುವು, ಕಸ್ತೂರಿ ರಂಗನ್ ಕಾನೂನು ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಜನ ಸಂಘಟನೆಯ ನೇತಾರ.ಎ.ಬಿ.ವಿ.ಪಿ ಯಲ್ಲಿ ಸೇವೆ. ಉಜಿರೆ ಕಾಲೇಜು ವಿದ್ಯಾರ್ಥಿ ನಾಯಕ, ಬಾ.ಜ.ಪಕ್ಷದ ಶಿಸ್ತಿನ ಕಾರ್ಯಕರ್ತ. ಶಿಶಿಲ ದೇವಾಲಯದ ಎಲ್ಲಾ ಕಾರ್ಯಕ್ರಮದಲ್ಲಿ ನಿರಂತರ ಭಾಗವಹಿಸುವಿಕೆ.
ಮೃತರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ತಮ್ಮ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ.
ಮೃತರು ತಂದೆ ಶ್ರೀನಿವಾಸ ಮೂಡೆತ್ತಾಯ, ತಾಯಿ ಹೇಮಲತಾ, ಸಹೋದರಿ ಅಶ್ವಿನಿಯನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
💮 ಜಾಹೀರಾತು 💮