ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ- ಇಂದಿನಿಂದ(ಮೇ.2) ಮೇ 9 ರವರೆಗೆ

ಶೇರ್ ಮಾಡಿ

ನೇಸರ ಮೇ‌.1: ಇತಿಹಾಸ ಪ್ರಸಿದ್ಧ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಮೇ ೨ರಿಂದ 9ರವರೆಗೆ ನಡೆಯಲಿದೆ.
ಮೇ 2ರಂದು ಧ್ವಜಾರೋಹಣ ಗೊಂಡು ಮೇ 3ರಂದು ಭಕ್ತರಿಂದ ಮೆರವಣಿಗೆಯ ಮೂಲಕ ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ. ಮೇ 4 ಮತ್ತು 5 ರಂದು ಕಟ್ಟೆಪೂಜೆ, ಮಹಾಪೂಜೆ, ಉತ್ಸವ ಭೂತಬಲಿ ಗಳು ನಡೆಯಲಿವೆ.
ಮೇ 6ರಂದು ಧನ್ವಂತರಿ ಯಾಗ ನಡೆಯಲಿದ್ದು ಶ್ರೀ ದೇವಳಕ್ಕೆ ನೂತನ ಕೊಡಿಮರದ ಮೆರವಣಿಗೆ ಜರಗಲಿದೆ ಬಳಿಕ ಸಭಾಕಾರ್ಯಕ್ರಮ ನಡೆಯಲಿದ್ದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ಮುಖ್ಯ ಅತಿಥಿಯಾಗಿ ಶಾಸಕ ಹರೀಶ್ ಪೂಂಜಾ, ಸಂಜೀವ ಮಠಂದೂರು, ಸಂಸದ ನಳಿನ್ ಕುಮಾರ್ ಕಟೀಲು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್ ಅಂಗಾರ ವಿಧಾನಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪ್ ಸಿಂಹ ನಾಯಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ಗ್ರಾ.ಪಂ.ಅಧ್ಯಕ್ಷ ಯೋಗೀಶ ಆಲಂಬಿಲ ಭಾಗವಹಿಸಲಿದ್ದಾರೆ.
ಮೇ 7 ರಂದು ದೇವಳದಲ್ಲಿ ದರ್ಶನ ಬಲಿ ಹಾಗೂ ಮಹಾರಥೋತ್ಸವ ನಡೆಯಲಿದೆ. ಮೇ 8 ರಂದು ಕವಾಟೋದ್ಘಾಟನಾ, ಧ್ವಜಾವರೋಹಣ ನಡೆಯಲಿದೆ. ಮೇ 9 ರಂದು ಸಂಪ್ರೋಕ್ಷಣೆ ಮಹಾಪೂಜೆ, ದೈವಗಳಿಗೆ ನರ್ತನ ಸೇವೆ, ಅಣ್ಣಪ್ಪ ಸ್ವಾಮಿಯ ನೇಮೋತ್ಸವ ಜರುಗಲಿದೆ.

 

💐 ಜಾಹೀರಾತು 💐

Leave a Reply

error: Content is protected !!