ಕೊಕ್ಕಡ: ಕನ್ನಡ ಸಾಹಿತ್ಯ ಪರಿಷತ್ತಿನ ಮತದಾರರ ಜೊತೆ ಸಂವಾದ

ಶೇರ್ ಮಾಡಿ

ನೇಸರ ನ 6: ಜೇಸಿಐ ಕೊಕ್ಕಡ ಕಪಿಲಾ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಅಭ್ಯರ್ಥಿ ಹಾಗೂ ಮತದಾರರ ಸಂವಾದ 2021 ಕಾರ್ಯಕ್ರಮ ನವೆಂಬರ್ 6 ರಂದು ಕೊಕ್ಕಡದ ಮರಿಯಾ ಕೃಪಾ ಸಂಕೀರ್ಣದಲ್ಲಿ ನಡೆಯಿತು.
ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಾಂಕಾಕ್ಷಿ ಡಾ.ಎಂ.ಪಿ.ಶ್ರೀನಾಥ್ ಅವರು ಮತದಾರರ ಜೊತೆ ಮುಕ್ತ ಚರ್ಚೆಯಲ್ಲಿ ತಮ್ಮ ಸಾಧನೆ ಹಾಗೂ ಪ್ರಣಾಳಿಕೆ ಕುರಿತು ಸವಿಸ್ತಾರವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಡಾ.ಎಂ.ಪಿ.ಶ್ರೀನಾಥ್ ಅವರು ತಮ್ಮ ಆಶಯ ಎಂಬ ಪ್ರಣಾಳಿಕೆಯನ್ನು ಜೇಸಿ ಅಧ್ಯಕ್ಷ ಜೇಸಿ ಕೆ.ಶ್ರೀಧರ ರಾವ್ ಅವರಿಗೆ ಹಸ್ತಾಂತರಿಸಿದರು.ಹಾಗೂ ಎಲ್ಲರ ಸಹಕಾರ ಕೋರಿದರು.2022 ನೇ ಸಾಲಿನ ಜೇಸಿ ಅಧ್ಯಕ್ಷರಾದ ಜೇಸಿ ಕೆ. ಶ್ರೀಧರ ರಾವ್ ಅವರು ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ.ಯಂ. ಶಿಕ್ಷಣ ಸಂಸ್ಥೆಗಳ ಸ್ಟೂಡೆಂಟ್ ವೆಲ್ಫೇರ್ ಅಧಿಕಾರಿ ಸೋಮಶೇಖರ ಶೆಟ್ಟಿ ಅವರು ಚುನಾವಣೆ ಕುರಿತು ಮಾರ್ಗದರ್ಶನ ನೀಡಿದರು.ಮುಖ್ಯ ಅತಿಥಿಗಳಾದ ವರ್ತಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕನ್ನಡ ಸಾಹಿತ್ಯ ಚಟುವಟಿಕೆಗಳು ನಡೆಸುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಶಿಕ್ಷಕರಾದ ಸತೀಶ್ ಶುಭ ಹಾರೈಸಿದರು.ಜೇಸಿ ರಾಜಾರಾಮ ಟಿ. ಅವರು ಅಭ್ಯರ್ಥಿಯನ್ನು ಪರಿಚಯಿಸಿದರು.ಜೇಸಿ ಜೋಸೆಫ್ ಪಿರೇರಾ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಜೂನಿಯರ್ ಜೇಸಿ ಶ್ರವಣ್ ಜೇಸಿ ವಾಣಿ ವಾಚಿಸಿದರು.ಜೇಸಿ ಹರಿಶ್ಚಂದ್ರ ಆಚಾರ್ಯ ಹಾಗೂ ಸದಸ್ಯರು ಸಹಕರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಇದೇ ನವೆಂಬರ್ 21 ರಂದು ಚುನಾವಣೆ ನಡೆಯಲಿದೆ.

Leave a Reply

error: Content is protected !!