ನೇಸರ ಮೇ.9: ಜೆಸಿಐ ಆಲಂಕಾರು ಘಟಕದ ವತಿಯಿಂದ ಉಚಿತ ದಂತ, ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವು ದಿನಾಂಕ 8.5.2022 ರಂದು ದ.ಕ.ಜಿ.ಪಂ.ಹಿ.ಪ್ರಾಥಮಿಕ ಶಾಲೆ, ಕುಂತೂರು ಇಲ್ಲಿ ಸಾರ್ವಜನಿಕ ದಂತ ಆರೋಗ್ಯ ವಿಭಾಗ, ಎ ಬಿ ಶೆಟ್ಟಿ ದಂತ ಆರೋಗ್ಯ ಮಹಾವಿದ್ಯಾಲಯ ಇವರ ಸಹಕಾರದಲ್ಲಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಲಂಕಾರು, ಗ್ರಾಮ ಪಂಚಾಯತ್ ಪೆರಾಬೆ ಇವುಗಳ ಸಹಯೋಗದಲ್ಲಿ ನಡೆಯಿತು.
ಈ ಶಿಬಿರದ ಉದ್ಘಾಟನೆಯನ್ನು ಜೆಸಿಐ ವಲಯ 15 ರ ಆಡಳಿತ ವಿಭಾಗದ ನಿರ್ದೇಶಕರಾದ ಜೆಸಿ.ಪುರುಷೋತ್ತಮ್ ಶೆಟ್ಟಿಯವರು ನಡೆಸಿದರು. ಅವರು ಈ ಸಂಧರ್ಭದಲ್ಲಿ ಮಾತನಾಡುತ್ತಾ, “ಜೆಸಿಐ ಆಲಂಕಾರು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಸದಾ ನಡೆಸುತ್ತಾ ಬರುತ್ತಿದೆ. ಅದಲ್ಲದೆ ಈ ವರುಷವೂ ಜೆಸಿ ಅಜಿತ್ ರೈ ಯವರ ನೇತೃತ್ವದಲ್ಲಿ ಬಹಳ ಯಶಸ್ವಿಯಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಸಮಾಜದ ಆರೋಗ್ಯವನ್ನು ಕಾಪಾಡುವಲ್ಲಿ ಇಂಥಹ ಕಾರ್ಯಕ್ರಮಗಳು ಅನಿವಾರ್ಯ. ಪಟ್ಟಣದ ಜನರಿಗೆ ಮನೆ ಬಾಗಿಲಲ್ಲೇ ವೈದ್ಯಕೀಯ ಸೇವೆ ಲಭ್ಯವಿರುವ ಈ ಕಾಲದಲ್ಲಿ, ಹಳ್ಳಿಯ ಜನರು ವೈದ್ಯಕೀಯ ಸೇವೆಗಳಿಗಾಗಿ ಸ್ವಲ್ಪ ಮಟ್ಟಿಗೆ ಹುಡುಕಾಡುವ ಪರಿಸ್ಥಿತಿ ಇಂದಿಗೂ ಇದೆ. ಒಂದು ಕಡೆಯಲ್ಲಿ ಒಂದು ಸೇವೆಯನ್ನು ಪಡೆದರೆ, ಇನ್ನೊಂದು ಸೇವೆಗಾಗಿ ಇನ್ನೊಂದು ಕಡೆಗೆ ಹೋಗಬೇಕಾದ ವಾಸ್ತವಿಕ ಸ್ಥಿತಿ. ಆದ್ರೆ ಜೇಸಿಐ ಆಲಂಕಾರು ಕುಂತೂರಿನಲ್ಲಿ ಎ ಬಿ ಶೆಟ್ಟಿ ವೈದ್ಯಕೀಯ ಆಸ್ಪತ್ರೆಯ ಮೂಲಕ ಒಂದೇ ಕಡೆಯಲ್ಲಿ ಹೆಚ್ಚಿನ ಸೇವೆಗಳನ್ನು ನೀಡುವ ವ್ಯವಸ್ಥೆ ಮಾಡಿದ್ದಾರೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಿ” ಎಂದು ಹೇಳಿದರು.
ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಪ್ರೊ ಸುಬ್ರಮಣ್ಯ ಭಟ್ ಇವರು ಮಾತನಾಡಿ ದಂತದ ಆರೋಗ್ಯ ಮತ್ತು ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಶ್ರೀಮತಿ ರೇಖಾ ಮತ್ತು ಪೆರಾಬೆ ಗ್ರಾಮಪಂಚಯತ್ ಉಪಾಧ್ಯಕ್ಷೆ ಶ್ರೀಮತಿ ಸಂಧ್ಯಾ ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಆಲಂಕಾರು ಘಟಕದ ಅಧ್ಯಕ್ಷರಾದ ಜೆಸಿ ಅಜಿತ್ ಕುಮಾರ್ ರೈ ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ, ಕಾರ್ಯಕ್ರಮದ ಸಂಪೂರ್ಣ ಮಾಹಿತಿಯನ್ನು ಜನರ ಮುಂದಿಟ್ಟು, ಅವುಗಳ ಸದ್ಬಳಕೆ ಮಾಡಬೇಕಾಗಿ ವಿನಂತಿ ಮಾಡಿಕೊಂಡರು. ವೇದಿಕೆಯಲ್ಲಿ ವೈದ್ಯಕೀಯ ಕಾಲೇಜಿನ ಡಾ. ಶಿಲ್ಪಾ, ಜೆಸಿಐ ಆಲಂಕಾರಿನ ಕಾರ್ಯದರ್ಶಿ ಜೇತನ್ ಎಂ, ಲೇಡಿ ಜೆಸಿ ಸಂಯೋಜಕಿ ಜೆಸಿ ಮಮತಾ ಅಂಬರಾಜೆ, ಕಾರ್ಯಕ್ರಮ ನಿರ್ದೇಶಕ ಜೆಸಿ ನಾರಾಯಣ ನೆಕ್ಕರೆ ಉಪಸ್ಥಿತರಿದ್ದರು. ಜೆಸಿ
ಈ ಸಂಧರ್ಭದಲ್ಲಿ ಘಟಕದ ಸ್ಥಾಪಕಾಧ್ಯಕ್ಷ, ಜೆಸಿ ಬಿ ಎಲ್ ಜನಾರ್ದನ್, ಪೂರ್ವಾಧ್ಯಕ್ಷರುಗಳಾದ ಜೆಸಿ ಪ್ರದೀಪ್ ಬಾಕಿಲ, ಜೆಸಿ ಪ್ರದೀಪ್ ರೈ ಮನವಳಿಕೆ, ಜೆಸಿ ಗುರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.ನಾರಾಯಣ ನೆಕ್ಕರೆ ಧನ್ಯವಾದ ಸಮರ್ಪಿಸಿದರು.
150 ಕ್ಕೂ ಹೆಚ್ಚು ಜನ ವಿವಿಧ ಸೇವೆಗಳಾದ ದಂತ ತಪಾಸಣೆ, ದಂತ ಶುಚಿ ಮಾಡುವುದು, ದಂತ ಚಿಕಿತ್ಸೆ, ನೇತ್ರ ತಪಾಸಣೆ, ನೇತ್ರ ಚಿಕಿತ್ಸೆ, ಡಯಾಬಿಟಿಸ್ ಪರೀಕ್ಷೆ ಮತ್ತು ಇತರ ಸೇವೆಗಳನ್ನು ಪಡೆದುಕೊಂಡರು.
🌸 ಜಾಹೀರಾತು 🌸