ನೇಸರ ಮೇ.16: ದ.ಕ.ಜಿಲ್ಲೆಯ ಶಿಶಿಲ ದೇವಾಲಯದ ವಾರ್ಷಿಕ ಜಾತ್ರೆ ಪ್ರಾರಂಭ. ಮಳೆಗಾಲದ ಪ್ರಾರಂಭದಲ್ಲಿ ಈ ಜಾತ್ರೆ ಕಾರಣದಿಂದ ಇದನ್ನು “ಕುರೊಂತಾಯನ” ಎಂದು ಕರೆಯುತ್ತಾರೆ.
ವಾರ್ಷಿಕ ಜಾತ್ರಾ ಶುಭ ಸಂಧರ್ಭದಲ್ಲಿ ದೇವಾಲಯದ ಮುಖ್ಯ ಮಹಾದ್ವಾರಕ್ಕೆ ಮತ್ತು ಬಾಗಿಲಿಗೆ ಹಿತ್ತಾಳೆ ಮುಚ್ಚಿಕೆ ಸೇವೆ ಸಮರ್ಪಿಸಲಾಯಿತು.
ಶಿಶಿಲ ಗ್ರಾಮದ ಹಿತ್ತಿಲು ಮನೆ ಶ್ರೀಮತಿ ಮತ್ತು ಶ್ರೀ ಸುನಿಲ್ ನೆಲ್ಲಿತ್ತಾಯ ಮತ್ತು ಶ್ರೀಮತಿ ಶ್ರೀ ಸೂರಜ್ ನೆಲ್ಲಿತ್ತಾಯ ಮನೆಯವರು ರೂ 2.20 ಲಕ್ಷ ವೆಚ್ಚದಲ್ಲಿ ಹಿತ್ತಾಳೆ ಮುಚ್ಚಿಕೆ ಮಾಡಿಸಿ ಶ್ರೀ ದೇವರಿಗೆ ಸಮರ್ಪಿಸಿದರು. ದೇವಾಲಯ ತಂತ್ರಿಗಳಾದ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಸಮರ್ಪಣಾ ವಿಧಿ ವಿಧಾನ ನೆರವೆರಿಸಿದರು.
ದೇವಾಲಯದ ಆಡಳಿತ ಮಂಡಳಿ ಅದ್ಯಕ್ಷ ಶ್ರೀ ಶ್ರೀನಿವಾಸ ಮೂಡತ್ತಾಯ ಸಮಿತಿ ಸದಸ್ಯರು ಹಾಜರಾಗಿದ್ದರು.ಈ ಸಂದರ್ಭದಲ್ಲಿ ಶ್ರೀ ಕೆಮ್ಮಿಂಜೆ ಕಾರ್ತಿಕ್ ತಂತ್ರಿಗಳು ಶ್ರೀಮತಿ ಮತ್ತು ಶ್ರೀ ಸುನಿಲ್ ನೆಲ್ಲಿತ್ತಾಯ ದಂಪತಿಗಳನ್ನು ಅಭಿನಂದಿಸಿದರು.
🌼 ಜಾಹೀರಾತು 🌼