ನೇಸರ ಮೇ 19: ಪುತ್ತೂರಿನ ಮುಳಿಯ ಜ್ಯುವೆಲ್ಸ್‌ನವರ ಬೆಳ್ಳಿ ಆಭರಣಗಳ ಮತ್ತು ಬೆಳ್ಳಿ ಸಂಗ್ರಹಗಳ ಮಳಿಗೆ ಮುಳಿಯ ಸಿಲ್ವರಿಯಾ ನೆಲ್ಯಾಡಿಯ ದುರ್ಗಾಶ್ರೀ ಟವರ್‍ಸ್ ನಲ್ಲಿ ಮೇ 18 ರಂದು ಶುಭಾರಂಭಗೊಂಡಿತು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಪಡೆದಿರುವ ಸ್ಥಳೀಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಾದ ನೆಲ್ಯಾಡಿ ಸಂತಜಾರ್ಜ್ ಪದವಿ ಪೂರ್ವ ಕಾಲೇಜಿನ ಅಂಕಿತ್, ದಿಶಾ ಎಂ.ಪಿ., ಅಪೇಕ್ಷಾ ಎಸ್.ಎಸ್., ಕೊಣಾಲು ಸರಕಾರಿ ಪ್ರೌಢಶಾಲೆಯ ಜೋಸ್ವಾ ಎನ್.ಜೆ., ಪಡುಬೆಟ್ಟು ಸರಕಾರಿ ಪ್ರೌಢಶಾಲೆಯ ಶಾಲೆಯ ರಚನ್‌ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ, 1944ರಲ್ಲಿ ಮುಳಿಯ ಜ್ಯುವೆಲ್ಸ್ ಪುತ್ತೂರಿನಲ್ಲಿ ಗೊಂಡಿತು. ಗ್ರಾಹಕರಿಗೆ ಗುಣಮಟ್ಟದ ಹಾಗೂ ಅತ್ಯುತ್ತಮ ಸೇವೆ ನೀಡುತ್ತಿದೆ. 2008ರಲ್ಲಿ ಮಡಿಕೇರಿ, 2009ರಲ್ಲಿ ಗೋಣಿಕೊಪ್ಪ, 2011ರಲ್ಲಿ ಪುತ್ತೂರಿನಲ್ಲಿ ವಿಸ್ತೃತ ಮಳಿಗೆ, 2012 ಬೆಂಗಳೂರಿನಲ್ಲಿ, 2018ರಲ್ಲಿ ಬೆಳ್ತಂಗಡಿಯಲ್ಲಿ ಶಾಖೆ ಆರಂಭಿಸಲಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸಂಸ್ಥೆ ಬೆಳೆಸುತ್ತಾ ಬಂದಿದೆ, ಉತ್ತಮ ರೀತಿಯ ಜನಸ್ಪಂದನೆ ಸಿಕ್ಕಿದೆ. ನೆಲ್ಯಾಡಿಯಲ್ಲಿ ಈಗ ಬೆಳ್ಳಿ ಆಭರಣ ಮತ್ತು ಪರಿಕರಗಳ ಮಳಿಗೆ ಆರಂಭಿಸಲಾಗಿದೆ. ನೆಲ್ಯಾಡಿಯ ಜನತೆ ಪ್ರೋತ್ಸಾಹಿಸಿ ಮುಳಿಯ ಸಂಸ್ಥೆಯನ್ನು ಎತ್ತರಕ್ಕೇರಿಸಲು ಸಹಕರಿಸಬೇಕೆಂದು ಹೇಳಿದರು.
ಮುಳಿಯ ಸಂಸ್ಥೆಯ ಸಿಎಂಡಿ ಮುಳಿಯ ಕೇಶವ ಪ್ರಸಾದ್‌ರವರು ಮಾತನಾಡಿ, ನೆಲ್ಯಾಡಿಯಲ್ಲಿ ಆರಂಭವಾದ ಸಂಸ್ಥೆಯ ಶಾಖೆಯು ಕಂಪನಿ ಆಪರೇಟೆಡ್ ಶಾಖೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಹಲವು ಶಾಖೆ ಆರಂಭಿಸುವ ಯೋಜನೆಯೂ ಇದೆ. ಜನರೇ ಹೂಡಿಕೆ ಮಾಡುವ ಮೂಲಕ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮುಳಿಯ ಸಂಸ್ಥೆ ಅವಕಾಶ ಮಾಡಿಕೊಡುತ್ತಿದ್ದು ರೂ.35 ಲಕ್ಷದಿಂದ ಹೂಡಿಕೆ ಆರಂಭಗೊಳ್ಳಲಿದೆ ಎಂದರು. ಪ್ರಾಂಚೈಸಿ ಓನ್ಡ್, ಕಂಪನಿ ಆಪರೇಟೆಡ್ ಹಾಗೂ ಪ್ರಾಂಚೈಸಿ ಓನ್ಡ್, ಪ್ರಾಂಚೈಸಿ ಆಪರೇಟೆಡ್ ಯೋಜನೆಯನ್ನೂ ಸಂಸ್ಥೆ ಪರಿಚಯಿಸುತ್ತಿದೆ. ರೂ. 75 ಸಾವಿರಕ್ಕಿಂತ ಹೆಚ್ಚು ಮುಂಗಡ ಹಣ ಪಾವತಿ ಮಾಡಿದಲ್ಲಿ 10 ತಿಂಗಳ ನಂತರ ಶೇ.8ರಷ್ಟು ವೇಸ್ಟೆಜ್‌ನಲ್ಲಿ ಬೋನಸ್ ನೀಡಲಾಗುವುದು ಎಂದರು. ಬೆಳ್ಳಿ ದೇಹದಿಂದ ವಿಷದ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಯಾವುದೇ ಸಂದರ್ಭದಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ಕಡಿಮೆಯಾಗುವುದಿಲ್ಲ ಎಂದರು ಕೇಶವ ಪ್ರಸಾದ್‌ರವರು, 8 ವರ್ಷಗಳ ಹಿಂದೆ ನೆಲ್ಯಾಡಿಯಲ್ಲಿ ಮುಳಿಯ ಜ್ಯುವೆಲ್ ನ ಪಾವತಿ ಕೇಂದ್ರ ಆರಂಭಿಸಲಾಗಿತ್ತು. ಇದಕ್ಕೆ ಜನರು ಒಳ್ಳೆಯ ಸಹಕಾರ ನೀಡಿದ್ದಾರೆ. ಇದೇ ರೀತಿಯಲ್ಲಿ ಮುಂದಿನ ದಿನವೂ ಸಹಕಾರ ನೀಡಿ ಬೆಳೆಸಬೇಕೆಂದು ಹೇಳಿದರು.
ದುರ್ಗಾಶ್ರೀ ಟವರ್‍ಸ್ ನ ಕಟ್ಟಡ ಮಾಲಕ ಸತೀಶ್ ಕೆ.ಎಸ್ ರವರು ಮಾತನಾಡಿ, ದರ ಕಡಿಮೆ ಹಾಗೂ ಒಳ್ಳೆಯ ಗುಣಮಟ್ಟದ ಸೇವೆಯಲ್ಲಿ ಮುಳಿಯ ಜ್ಯುವೆಲ್ಸ್ ಸಂಸ್ಥೆ ಹೆಸರಾಗಿದೆ, ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿನ್ನ ಹಾಗೂ ಬೆಳ್ಳಿಗೆ ನೆಲ್ಯಾಡಿ ಜನತೆ ಪುತ್ತೂರಿಗೆ ಹೋಗಬೇಕಾಗಿತ್ತು. ಈಗ ನೆಲ್ಯಾಡಿಯಲ್ಲಿಯೇ ಸಿಗುವಂತೆ ಆಗಿದೆ. ಇಲ್ಲಿನ ಜನರು ಸಂಸ್ಥೆಗೆ ಸಹಕಾರ ನೀಡಿ ಬೆಳೆಸಬೇಕೆಂದು ಹೇಳಿದರು. ಮುಳಿಯ ಸಂಸ್ಥೆಯ ಶರತ್ ಶ್ಯಾಂ ಭಟ್, ಮುಳಿಯ ಕುಟುಂಬಸ್ಥರು, ಮುಳಿಯ ಸಂಸ್ಥೆಯ ಸಿಬ್ಬಂದಿಗಳ, ಉದ್ಯಮಿ ರವಿಪ್ರಸಾದ್ ಆಚಾರ್ಯ, ನೆಲ್ಯಾಡಿಯ ಸೀನಿಯರ್ ಚೇಂಬರ್ ನ ಅಧ್ಯಕ್ಷರಾದ ಆರ್.ವೆಂಕಟ್ರಮಣ, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಾಮ್‌ದೇವ ಮಲ್ಯ ಸ್ವಾಗತಿಸಿ, ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಪ್ರಶಾಂತ್ ವಂದಿಸಿದರು. ಉದಯಕುಮಾರ್ ಲಾಯಿಲ ನಿರೂಪಿಸಿದರು. ಸಂದೇಶ ಪ್ರಾರ್ಥಿಸಿದರು.
ಸನ್ಮಾನ:
ಆರ್ಯಭಟ ಪ್ರಶಸ್ತಿಗೆ ಭಾಜನರಾಗಿರುವ ಕಲಾವಿದ ಉದಯಕುಮಾರ್ ಲಾಯಿಲ, ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಧಿಕ ಅಂಕಪಡೆದಿರುವ ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಶೆರ್ವಿನ್ ಶಾಜಿ ಇವರನ್ನು ಮುಳಿಯ ಸಂಸ್ಥೆಯ ಪರವಾಗಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಶುಭಾರಂಭದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನೆಲ್ಯಾಡಿಯ ನಟವರ್ಯ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳಿಗೆ ಭರತನಾಟ್ಯ, ಡ್ಯಾನ್ಸ್ ನಡೆಯಿತು.
ಜಾಹೀರಾತು