ಮಡಂತ್ಯಾರು: ಜೇಸಿಐ ಮಧ್ಯಂತರ ಸಮ್ಮೇಳನ “ರಂಗೋಲಿ”

ಶೇರ್ ಮಾಡಿ

ನೇಸರ ಮೇ‌.30: ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಮ್ಯುನಿಟಿ ಹಾಲ್ ನಲ್ಲಿ ಜೇಸಿಐ ಇಂಡಿಯ ವಲಯ 15ರ ಮಧ್ಯಂತರ ಸಮ್ಮೇಳನ 2022 “ರಂಗೋಲಿ” ಮೇ.29 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ವಲಯ 15ರ ಜೇಸಿ.ಸೆನೆಟರ್.ರೋಯನ್ ಉದಯ ಕ್ರಾಸ್ತ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ವನ್ನು ಉದ್ಘಾಟಿಸಿ, ಒಂದು ಚುಕ್ಕಿಯಿಂದ ಪ್ರಾರಂಭವಾದ ಒಂದು ಗೆರೆ ಪೂರ್ಣವಾಗಿ ಸುತ್ತಿ ಯಾವ ರೀತಿ ಸುಂದರವಾಗಿ ಶೋಭಿಸುತ್ತದೆ ಅದೇ ರೀತಿ ನಮ್ಮ ವಲಯದ ಎಲ್ಲಾ ಜೇಸಿಗಳ ಸರಕಾರದಿಂದ ಮಧ್ಯಂತರ ಸಮ್ಮೇಳನ ಶೋಭಿಸಲಿ ಎಂದರು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದ ಗೌರವ ಅತಿಥಿ ಜೇಸಿ.ಪಿಪಿಪಿ.ರಾಕೇಶ್ ಕುಂಜೂರು, ಪೂರ್ವ ವಲಯಾಧಿಕಾರಿ ಮಾತನಾಡಿ ಈ ಮಧ್ಯಂತರ ಸಮ್ಮೇಳನವು ಅತ್ಯಂತ ಸುಂದರವಾಗಿ ಬಣ್ಣ ಬಣ್ಣಗಳಿಂದ ಶೋಭಿಸುತ್ತಿದೆ, ಹೆಸರಿಗೆ ತಕ್ಕಂತೆ ರಂಗೋಲಿಯ ಬಣ್ಣಗಳಂತೆ ಕಂಗೊಳಿಸಲಿದೆ. ರಂಗ ಎಂದರೆ ಭಗವಂತ, ಒಲಿ ಎಂದರೆ ಅನುಗ್ರಹಿಸು ಎಂದು ಅರ್ಥ ಎಂಬುದಾಗಿ ರಂಗೋಲಿ ಪದದ ಅರ್ಥವನ್ನು ಸಭೆಗೆ ತಿಳಿಸಿದರು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ JFM.ಪ್ರೊ.ರಾಜನ್ ವಿ.ಎನ್, ಪ್ರಾಂಶುಪಾಲರು ಪದುವ ಕಾಲೇಜು ಆಫ್ ಕಾಮರ್ಸ್ ಮತ್ತು ಮೆನೇಜ್ಮೆಂಟ್ ಮಂಗಳೂರು ರವರು ಮಾತನಾಡಿ ಜೇಸಿ ಎಂಬುದು ಒಂದು ಸಂಸ್ಥೆಯಲ್ಲ ಅದು ಕಲಿಕೆಯ ವೇದಿಕೆ, ಇಲ್ಲಿ ತುಂಬಾ ಅವಕಾಶಗಳಿವೆ, ಜೇಸಿಯ ತತ್ವದಂತೆ ಜಗತ್ತಿನ “ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ” ಅದನ್ನು ಬೆಳಗಿಸಿ, ಜೀವ ತುಂಬುವ ಕೆಲಸವನ್ನು ಸಂಸ್ಥೆ ಮಾಡಬೇಕಾಗಿದೆ. ಜೇಸಿಯಲ್ಲಿ ತರಬೇತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು, ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡಬೇಕು, ಬಡತನ ಎಂಬುದು ಹಣಕಾಸಿಗೆ ಸಂಬಂಧಿಸಿದ್ದು ಹೊರತು ಸಾಧನೆಗೆ ಬಡತನ ಬರಬಾರದು. ಜೇಸಿ ಸಂಸ್ಥೆಗೆ ಹೆಚ್ಚು ಹೆಚ್ಚು ಯುವಕರು ಬರುವಂತಾಗಬೇಕು ಎಂದು ಈ ಸಂದರ್ಭದಲ್ಲಿ ನುಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ.ದಿನೇಶ್ ಶೆಟ್ಟಿ, ವಲಯ ಉಪಾಧ್ಯಕ್ಷರು ವಹಿಸಿದ್ದರು. ವೇದಿಕೆಯಲ್ಲಿ ವಲಯ 15ರ ನಿಕಟಪೂರ್ವ ಅಧ್ಯಕ್ಷೆ ಜೇಸಿ.ಸೆನೆಟರ್. ಸೌಜನ್ಯ ಹೆಗ್ಡೆ, ಜೇಸಿ.ಮರಿಯಾ ಜ್ಯೋತಿ, ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್, ಆತಿಥ್ಯ ಘಟಕದ ಅಧ್ಯಕ್ಷರಾದ JFD.ಭರತ್ ಶೆಟ್ಟಿ, ವಲಯ 15ರ ಎಲ್ಲಾ ವಲಯ ಉಪಾಧ್ಯಕ್ಷರು ಜೇಸಿ.ಹರೀಶ್ ಶೇಟ್, ಜೇಸಿ.ರವಿಚಂದ್ರ ಪಾಟಾಳಿ, ಜೇಸಿ.ದೀಪಕ್ ಗಂಗೂಲಿ, ಜೇಸಿ.ನರಸಿಂಹ ಐತಾಳ್, ಜೇಸಿ.ಸ್ವಾತಿ.ರೈ, ಜೇಸಿ.ಪ್ರಶಾಂತ್ ಲಾಯಿಲ, ಆಡಳಿತ ಮಂಡಳಿಯ ಜೇಸಿ.ಪುರುಷೋತ್ತಮ ಶೆಟ್ಟಿ, ವಲಯ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಸನ್ಮಾನ:
ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಧೋನಿ ಎಂಬ ಹೆಸರಿನ ಕೋಣವಿದೆ. ಅದರ ಜೊತೆಗಾರ ರಾಕೆಟ್ ಬೊಲ್ಲ. ಈ ಜೋಡಿ ಕೋಣಗಳ ರಾಕೆಟ್ ವೇಗದ ಓಟ ಇದೀಗ ಹೊಸ ದಾಖಲೆಯನ್ನು ಬರೆದಿದೆ. ಐಕಳದಲ್ಲಿ ನಡೆದ ಕಾಂತಬಾರೆ ಬೂದಬಾರೆ ಜೋಡುಕೆರೆ ಕಂಬಳದಲ್ಲಿ ಬೋಳದಗುತ್ತು ಸತೀಶ್ ಶೆಟ್ಟಿ ರವರ ಈ ಕೋಣ “9.14” ಸೆಕೆಂಡಿನಲ್ಲಿ 100 ಮೀಟರ್ ಕ್ರಮಿಸಿ ಹೊಸ ದಾಖಲೆಯನ್ನು ಬರೆದಿತ್ತು ಹಾಗೂ ಅನೇಕ ಕಂಬಳಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದ “ಧೋನಿಗೆ” ಜೇಸಿಐ ಮಡಂತ್ಯಾರಿನಲ್ಲಿ ನಡೆದ ಮಧ್ಯಂತರ ಸಮ್ಮೇಳನ 2022 “ರಂಗೋಲಿ” ಯಲ್ಲಿ ವಿಶೇಷವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ದಿಕ್ಸೂಚಿ ಭಾಷಣ:
ಅಂತರಾಷ್ಟ್ರೀಯ ಖ್ಯಾತಿಯ ಕಿರುತೆರೆ ನಟಿ ಹಾಗೂ ನಗೆ ಭಾಷಣಕಾರರಾದ ಶ್ರೀಮತಿ ಸುಧಾ ಬರಗೂರು ರವರಿಂದ ದಿಕ್ಸೂಚಿ ಭಾಷಣ ನೆರವೇರಿತು.
ಸ್ಪರ್ಧಾ ಕಾರ್ಯಕ್ರಮ:
ಸಮ್ಮೇಳನದಲ್ಲಿ ಘಟಕಗಳ ವತಿಯಿಂದ ಕರಾವಳಿ ಸಾಂಸ್ಕೃತಿಕ ವೈಭವ, ಘಟಕಗಳ ವಿಭಿನ್ನ ಭಾವಚಿತ್ರಗಳ ಪ್ರದರ್ಶನ, ಬ್ಯಾನರ್ ಪ್ರದರ್ಶನ, ಭಾಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.

ಬಹುಮಾನ:
ಮಧ್ಯಂತರ ವಲಯ ಸಮ್ಮೇಳನದಲ್ಲಿ ಘಟಕವಾರು ಘಟಕಗಳು ಮಾಡಿದಂತ ಕಾರ್ಯಕ್ರಮಗಳ ಆಧಾರದ ಮೇಲೆ ಘಟಕ ಅಧ್ಯಕ್ಷರುಗಳನ್ನು, ಘಟಕಗಳನ್ನು ವಲಯ ಅಧ್ಯಕ್ಷರು ಪ್ರಶಸ್ತಿಗಳನ್ನು ನೀಡುವುದರೊಂದಿಗೆ ಗೌರವಿಸಿದರು.
ವಲಯ ಉಪಾಧ್ಯಕ್ಷರ ಪರಿಚಯದ ವಿಡಿಯೋ ತಯಾರಿಸಿದ ರಿಯಾ ಕ್ರಿಸ್ಟಲ್, ರಂಗೋಲಿಯನ್ನು ಬಿಡಿಸಿದ ಜೇಸಿ.ಆಶಾ ಪ್ರಶಾಂತ್, ಸಮ್ಮೇಳನದ ಯಶಸ್ಸಿಗೆ ಕಾರಣಕರ್ತರಾದ ಜೇಸಿ.ಜಯೇಶ್ ಬರೆಟ್ಟೋ ರವರನ್ನು ಗೌರವಿಸಲಾಯಿತು.

ಸಭೆಯಲ್ಲಿ ವಲಯದ ಎಲ್ಲಾ ಪೂರ್ವ ಅಧ್ಯಕ್ಷರುಗಳು, ಎಲ್ಲಾ ಘಟಕ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಜೇಸಿ ಸದಸ್ಯರುಗಳು ಮೊದಲಾದವರು ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಸೌಮ್ಯ ರಾಕೇಶ್ ವಂದಿಸಿದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!