ನೆಲ್ಯಾಡಿ: ವಿದ್ಯಾರ್ಥಿಗಳಿಗಾಗಿ “ಡ್ರಾಮಾ ಡ್ರೀಮ್” ಆಕ್ಟಿಂಗ್ ಕ್ಲಾಸ್

ಶೇರ್ ಮಾಡಿ

ನೇಸರ ಮೇ‌.31:ನೆಲ್ಯಾಡಿ ಪರಿಸರದ ಎಲ್ಲಾ ಶಾಲೆಯ ಆಸಕ್ತ ವಿದ್ಯಾರ್ಥಿಗಳಿಗೊಂದು ಸುವರ್ಣವಕಾಶ ಶ್ರೀರಾಮ ವಿದ್ಯಾಲಯ ಸೂರ್ಯನಗರ, ನೆಲ್ಯಾಡಿ ಇಲ್ಲಿ ಜೂನ್ 05 ರಂದು ಡ್ರಾಮಾ ಡ್ರೀಮ್ ಆಕ್ಟಿಂಗ್ ಕ್ಲಾಸ್, ಕಲಿಕೆಯೊಂದಿಗೆ ರಂಗ ಶಿಕ್ಷಣ ತರಗತಿ ಪ್ರಾರಂಭವಾಗಲಿದ್ದು ಪ್ರತಿ ಆದಿತ್ಯವಾರ ಸಮಯ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಕ್ಲಾಸ್ ನಡೆಯಲಿದೆ. ರಂಗ ಶಿಕ್ಷಣದ ಅಭ್ಯಾಸ ಮಾಲಿಕೆಯಲ್ಲಿ ತಯಾರಾದ ನಾಟಕವನ್ನು ರಂಗ ಪ್ರದರ್ಶನ ಗೈದು ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿ ಪ್ರತಿಭೆಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ತಿಂಗಳ ಶುಲ್ಕ : ರೂ 300/ ತರಗತಿಗೆ ಸೇರಲಿಚ್ಚಿಸುವ ವಿದ್ಯಾರ್ಥಿಗಳು ದಿನಾಂಕ ಜೂನ್ 05 ಆದಿತ್ಯವಾರ ಸಮಯಕ್ಕೆ ಮುಂಚಿತವಾಗಿ ಪೋಷಕರೊಂದಿಗೆ ಬಂದು ನೋಂದಣಿ ಶುಲ್ಕ ರೂ. ಮುನ್ನೂರು ಪಾವತಿಸಿ ದಾಖಲಾತಿ ಮಾಡಿಕೊಳ್ಳಬಹುದು.
ಬೇಕಾಗುವ ದಾಖಲೆಗಳು: ವಿದ್ಯಾರ್ಥಿಯ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಒಂದು ಪಾಸ್ ಪೊರ್ಟ್ ಭಾವಚಿತ್ರ.
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಬಹುದು: KALAMAYE CULTURAL EDUCATION INSTITUTE (R)YENEKAL. KADABA. D.K 9686714517 9019170432 9731968550

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!