ನೇಸರ ಜೂ.01: ಜೇಸಿಐ ವಲಯ 15ರ ಮಧ್ಯಾಂತರ ಸಮ್ಮೇಳನ “ರಂಗೋಲಿ” ಜೆಸಿಐ ಮಡಂತ್ಯಾರ್ ಘಟಕದ ನೇತೃತ್ವದಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ಜೆಸಿಐಯ ಗುರಿ ಉದ್ದೇಶಗಳನ್ನು ಈಡೇರಿಸಲು ಶ್ರಮಿಸಿದ ಘಟಕಗಳಿಗೆ ವಿವಿಧ ರೀತಿಯ ಮನ್ನಣೆ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಪ್ಪಿನಂಗಡಿ ಘಟಕ ಅನೇಕ ಪುರಸ್ಕಾರಗಳನ್ನು ಪಡೆದುಕೊಂಡಿದೆ.
ವಲಯಾಧ್ಯಕ್ಷರಾದ ಜೇಸಿ ರೋಯನ್ ಉದಯ್ ಕ್ರಾಸ್ತ ಮತ್ತು ವಲಯ ಉಪಾಧ್ಯಕ್ಷರಾದ ಜೇಸಿ ದೀಪಕ್ ಗಂಗೂಲಿ ಮತ್ತು ಇತರ ವಲಯ ಉಪಾಧ್ಯಕ್ಷರು ಮತ್ತು ವಲಯ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಉಪ್ಪಿನಂಗಡಿ ಘಟಕಾಧ್ಯಕ್ಷ JFD ಮೋಹನ್ ಚಂದ್ರ ತೋಟದಮನೆ. ‘ಡಿ’ ಪ್ರಾಂತ್ಯದ “ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ” ಸೇರಿದಂತೆ ಘಟಕಕ್ಕೆ ಡೈಮಂಡ್ ಘಟಕ ಪುರಸ್ಕಾರ, ಅಕ್ಷಯ ರತ್ನ ಪುರಸ್ಕಾರ, ಸೆಲ್ಯೂಟ್ ಟೂ ಸೈಲೆಂಟ್ ವರ್ಕರ್ ಕಾರ್ಯಕ್ರಮ ಪುರಸ್ಕಾರ, ಸ್ಪರ್ಕ್ಲಿಂಗ್ ಅಂಬಾಸಿಡರ್ ಪುರಸ್ಕಾರ, ಮಿನುಗುತಾರೆ ಪುರಸ್ಕಾರ, ರಕ್ತದಾನ ಪುರಸ್ಕಾರ, ಬಿಸಿನೆಸ್ ಏರಿಯಾ ಪುರಸ್ಕಾರ, ಸಿಎಪಿಪಿ ಪ್ರಶಸ್ತಿ, ನ್ಯಾಷನಲ್ ಟ್ರೈನಿಂಗ್ ಡೇ ಪುರಸ್ಕಾರ, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸಿದಕ್ಕೆ “ಪಂಚರತ್ನ ಪ್ರಶಸ್ತಿ”, ಕಮ್ಯುನಿಟಿ ಡೆವಲಪ್ಮೆಂಟ್ ಪುರಸ್ಕಾರ ಪಡೆದುಕೊಂಡಿದ್ದಾರೆ.
ಘಟಕ ವೈಭವ ಸ್ಪರ್ಧೆಯಲ್ಲಿ ಉಪಾಧ್ಯಕ್ಷರಾದ ಜೇಸಿ ಕುಶಾಲಪ್ಪ ನೇತೃತ್ವದಲ್ಲಿನ ತಂಡ ದ್ವಿತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಘಟಕದ ಫೋಟೋ ಡಿಸ್ಪ್ಲೇ ಮತ್ತು ಬ್ಯಾನರ್ ರಚನೆ ಸ್ಪರ್ಧೆಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಲಯದ ಮಧ್ಯಂತರ ಸಮ್ಮೇಳನದಲ್ಲಿ ಉಪ್ಪಿನಂಗಡಿ ಘಟಕದಿಂದ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದ ಮನೆ, ಜೇಸಿ ಕೆ ವಿ ಕುಲಾಲ್, ಜೇಸಿ ಪ್ರಶಾಂತ್ ಕುಮಾರ್ ರೈ, ಜೇಸಿ ಶಶಿಧರ್ ನೆಕ್ಕಿಲಾಡಿ, ಜೇಸಿ ಲವಿನಾ ಪಿಂಟೊ, ಜೇಸಿ ಉಮೇಶ್ ಆಚಾರ್ಯ, ಜೇಸಿ ಹರೀಶ್ ನಟ್ಟಿಬೈಲು, ಜೇಸಿ ಮಹೇಶ್ ಖಂಡಿಗ, ಜೇಸಿ ದಿವಾಕರ ಶಾಂತಿನಗರ, ಜೇಸಿ ಪುರುಷೋತ್ತಮ ತೋಟದ ಮನೆ, ಜೇಸಿ ಪುನೀತ್ ಮಂಜಿಪಲ್ಲ, ಜೇಸಿ ಸುರೇಶ್,
ಜೇಸಿ ಕುಶಾಲಪ್ಪ, ಜೇಸಿ ಮಹೇಶ್ ಖಂಡಿಗ, ಅರ್ಚನಾ, ಪ್ರಣಮ್ಯ, ಕೃತಿಕಾ, ಕಿರಣ್ ಮುರಳಿ, ಅರುಣ್ ಮುರಳಿ, ಅನಿಶ್, ಮಹೇಶ್, ಪ್ರಣೇಶ್ ಶ್ರವಣ್, ವರುಣ್, ಪ್ರಜ್ವಲ್, ಮೋಹನ್, ನವ್ಯ, ಯಶು, ಮೇಘ ಭಾಗವಹಿಸಿದರು.
ಜಾಹೀರಾತು