ಪ್ರಕೃತಿಯನ್ನು ಪ್ರೀತಿಸಬೇಕು, ಪರಿಸರವನ್ನು ಸಂರಕ್ಷಿಸಬೇಕು- ಮಧುಸೂದನ್

ಶೇರ್ ಮಾಡಿ

ನೇಸರ ಜೂ.05: ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಭಾಗವಾಗಿ ಜೂನ್ 4ರಂದು ಆಚರಿಸಲಾಯಿತು.

ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಅರಣ್ಯ ಇಲಾಖೆಯ ಉಪ್ಪಿನಂಗಡಿ ಉಪವಿಭಾಗಧಿಕಾರಿ ಮಧುಸೂದನ್ ವಿಶ್ವ ಪರಿಸರ ದಿನಾಚರಣೆಯು 1974 ರಲ್ಲಿ ಅಸ್ತಿತ್ವಕ್ಕೆ ಬರಲು ಕಾರಣವಾದ ಸಮಕಾಲೀನ ವಿದ್ಯಮಾನಗಳ ಬಗ್ಗೆ ತಿಳಿಸಿದರು. ಪ್ರಕೃತಿಯನ್ನು ಪ್ರೀತಿಸಬೇಕು, ಪರಿಸರವನ್ನು ಸಂರಕ್ಷಿಸಬೇಕು, ನಾವು ಪರಿಸರದ ಮೇಲೆ ದೌರ್ಜನ್ಯವನ್ನು ಎಸಗಬಾರದು. ಮೊಬೈಲ್ ಬಳಕೆಯ ಉತ್ತಮ ಅಂಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಮೊಬೈಲ್ ಚಟಕ್ಕೆ ಬಲಿಯಾಗಬಾರದು. ತಂದೆ, ತಾಯಿ, ಗುರು ಈ ಮೂರು ವ್ಯಕ್ತಿಗಳನ್ನು ಗೌರವಿಸಿದಲ್ಲಿ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.
ಸಾಫೆನ್ಸಿಯ ಬೆಥನಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ಮೆಲ್ವಿನ್ ಮ್ಯಾಥ್ಯುರವರು ಪ್ರಕೃತಿ ಮತ್ತು ಪೋಷಣೆ ಬಗ್ಗೆ ಮಾತನಾಡಿದರು. ಪ್ರಕೃತಿ ಎಂಬುದು ನಮಗೆ ನಿಸರ್ಗದತ್ತವಾಗಿ ದೊರೆತ ಕೊಡುಗೆ ನಾವು ಇದರ ಒಂದು ಭಾಗವಾಗಿ ಸಂರಕ್ಷಕರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ವೇದಿಕೆಯಲ್ಲಿ ಬೆಥನಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ತೋಮಸ್ ಬಿಜಿಲಿ ಒ.ಐ.ಸಿ, ಬೆಥನಿ ಐಟಿಐ ಕಾಲೇಜಿನ ಪ್ರಾಂಶುಪಾಲ ಸಜಿ ಕೆ ತೋಮಸ್, ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಜೋಸ್ ಎಂ.ಜೆ., ಪದವಿಪೂರ್ವ ವಿಭಾಗದ ಮುಖ್ಯಸ್ಥ ಸುಶೀಲ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಅದೃಷ್ಟ ಶಿಕ್ಷಕಿಯಾಗಿ ಪೂರ್ಣಿಮಾ ಹರೀಶ್ ಹಾಗೂ ವಿದ್ಯಾರ್ಥಿಗಳಿಂದ 8ನೇ ತರಗತಿಯ ಸಾರ್ಥಕ್ ಇವರಿಗೆ ಉತ್ತಮ ಗಿಡವನ್ನು ಅತಿಥಿಗಳು ನೀಡಿ ಗೌರವಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಕಿರು ರೂಪಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪರಿಸರ ರಕ್ಷಣೆಯ ಪ್ರತಿಜ್ಞಾ ವಾಕ್ಯವನ್ನು ಶಾಲಾ ನಾಯಕ ಶರ್ವಿನ್ ಶಾಜಿ ವಾಚಿಸಿದರು. ನೀಮ ನಿರೂಪಿಸಿದ ಕಾರ್ಯಕ್ರಮದಲ್ಲಿ, ಮನಿಷಾ ಸ್ವಾಗತಿಸಿ, ಸಾನ್ವಿ ವಂದಿಸಿದರು.
ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವವನ್ನು ತಿಳಿಸುವ ಹಾಗೂ ಪರಿಸರ ಶುಚಿತ್ವನ್ನು ಕಾಪಾಡುವ ಜಾಗೃತಿಯನ್ನು ಕಾರ್ಯಕ್ರಮದೊಂದಿಗೆ ಮೂಡಿಸಲಾಯಿತು.ಶಾಲಾ ಪರಿಸರದಲ್ಲಿ ಅತಿಥಿಗಳು ಮತ್ತು ವಿದ್ಯಾರ್ಥಿಗಳಿಂದ ಗಿಡವನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!