ನೇಸರ ಜೂ.06: ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಿವೃತ್ತ ಶಿಕ್ಷಕರಾದ ಡಾ. ಜಿ ಬಿ ಮೆಹಂದಳೆ ರವರ ಮಾರ್ಗದರ್ಶನದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಶಾಂಕ ಗೋಖಲೆಯವರ ಪುತ್ರನಾದ ಅಕ್ಷಯ ಗೋಖಲೆಯವರು ರಚಿಸಿರುವ ಕೊಲಾಜ ಚಿತ್ರವನ್ನು ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಪುತ್ತಿಲ ರವರು ಬಿಡುಗಡೆಗೊಳಿಸಿ ಮಾತನಾಡಿದ ಪರಿಸರದ ಗಿಡಗಳ ಸಂರಕ್ಷಣೆ ಅತ್ಯವಶ್ಯಕ, ಪರಿಸರದ ಗಿಡಗಳ ನಾಶದಿಂದ ಆಮ್ಲಜನಕದ ಕೊರತೆ ಉಂಟಾಗಿ ಶ್ವಾಸಕೋಶ ಸಂಬಂಧಿ ಹಾಗೂ ಇತರ ಕಾಯಿಲೆಗಳು ಬರುತ್ತವೆ ಎಂದರು.
ಈ ಸಂದರ್ಭದಲ್ಲಿ ಕೊಲಾಜ ಚಿತ್ರ ರಚಿಸಲು ಮಾರ್ಗದರ್ಶನ ನೀಡಿದ ದ್ರೋಣಾಚಾರ್ಯ ಸಮ್ಮಾನ ಪ್ರಶಸ್ತಿ ಪುರಸ್ಕೃತ ಡಾ. ಜಿ ಜಿ ಮೆಹಂದಳೆ ಮಾತನಾಡಿ ಪರಿಸರ ಮಾನವನ ಉಸಿರು. ಮಾನವನ ಉಸಿರಿಗೆ ಹಸಿರು ಗಿಡಮರಗಳಿಂದ ಹೇರಳವಾಗಿ ಆಮ್ಲಜನಕವನ್ನು ಉತ್ಪತ್ತಿಯಾಗುವುದು. ಆಮ್ಲಜನಕವನ್ನು ಪ್ರಯೋಗಾಲಯದಲ್ಲಿ ಬೇರೆಬೇರೆ ದ್ರವಗಳಂತೆ ಕೃತಕವಾಗಿ ಉತ್ಪಾದಿಸಲು ಅಸಾಧ್ಯ. ಗಿಡ ಮರಗಳ ನಾಶ ಮಾನವನ ಸಂಕುಲಕ್ಕೆ ಮಾರಕ. ಮುಂದಿನ ದಿನಗಳಲ್ಲಿ ಆಮ್ಲಜನಕದ ಸಿಲಿಂಡರ್ ಗಳನ್ನು ಪ್ರತಿಯೊಬ್ಬರು ಬೆನ್ನಿಗೆ ಹಾಕಿಕೊಂಡರು ಅದನ್ನು ನೋಡಿ ಆಶ್ಚರ್ಯ ಪಡಬೇಕಾಗಿಲ್ಲ. ಈಗಾಗಲೇ ಕೊರೊನಾ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ತೊಂದರೆ ಅನುಭವಿಸಿದ್ದನ್ನು ಕಂಡಿದ್ದೇವೆ. ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಮನೆಮನೆಗೆ ಬಾರದಂತೆ ತಡೆಯಲು ಆಮ್ಲಜನಕ ನೀಡುವ ಗಿಡಗಳನ್ನು ನೆಟ್ಟು ಪೋಷಿಸಬೇಕಾದದ್ದು ಎಲ್ಲರ ಕರ್ತವ್ಯ. ಗಿಡಮರಗಳ ಬೆಳವಣಿಗೆಗೆ ನೀರಿನ ಅವಶ್ಯಕತೆ ಇದ್ದು ಮಳೆಗಾಲದಲ್ಲಿ ನೀರು ಪೋಲಾಗದಂತೆ ಇಂಗುಗುಂಡಿಗಳನ್ನು ರಚಿಸಿ ನೀರು ಭೂಮಿಯನ್ನು ಸೇರುವಂತೆ ನೋಡಿಕೊಳ್ಳಬೇಕು ಎಂದು ನುಡಿದರು. ಇದೇ ಸಮಯದಲ್ಲಿ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಚಿತ್ರಕಲಾವಿದ ಡಾ.ಮೆಹಂದಳೆ ಯವರನ್ನು ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಸೇರಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಶಶಾಂಕ ಗೋಖಲೆ, ಉಪಾಧ್ಯಕ್ಷರಾದ ಕೃಷ್ಣಪ್ಪ ದೇವಾಡಿಗ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೋಮಸುಂದರ ಶೆಟ್ಟಿ, ಕುಟ್ರುಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ, ಸಂಘದ ನಿರ್ದೇಶಕರಾದ ಜಯಚಂದ್ರ ರೈ, ಪದ್ಮಯ್ಯ ಪೂಜಾರಿ, ನೀಲಯ್ಯ ಬನಾರಿ, ಸೀತಮ್ಮ, ಸೀತಾರಾಮ ಡಿ ಪಿ, ಕುಶಾಲ್ ಕುಮಾರ್, ಜಗನ್ನಾಥ ಜಿ, ಕುಕ್ಕ ಎನ್, ಶ್ರೀಮತಿ ಸವಿತಾ ಸಿ ಜಿ, ಸಂಘದ ಸಿಬ್ಬಂದಿಗಳು ಹಾಗೂ ಕುಟ್ರುಪಾಡಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜಾಹೀರಾತು