ನೇಸರ ನ10: ಬಿ.ಜೆ.ಪಿ. ಕಲೆ ಮತ್ತು ಸಾಂಸ್ಕøತಿಕ ಪ್ರಕೋಷ್ಟ ದ.ಕ ಜಿಲ್ಲೆ, ಬಂಟ್ಟಾಳ ಮಂಡಲ, ಕಾರ್ಮಿಕ ಇಲಾಖೆಯ ಸಹಯೋಗದೊಂದಿಗೆ ಅಸಂಘಟಿತ ವಲಯದ ಕಲಾವಿದರನ್ನು ನೋಂದಾಯಿಸುವ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಪ್ರಕೋಷ್ಟ ಬಂಟ್ವಾಳ ಮಂಡಲದ ಪದಗ್ರಹಣ ಸಮಾರಂಭ ದಿನಾಂಕ 15/11/2021ರ ಸೋಮವಾರ ಬೆಳ್ಳಗ್ಗೆ 9ಕ್ಕೆ ಸ್ವರ್ಶಕಲಾ ಮಂದಿರ, ಬಿ.ಸಿ.ರೋಡುನಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಉದ್ಘಾಟನೆಯನ್ನು ಯು.ರಾಜೇಶ್ ನಾೈಕ್ ಉಳಿಪಾಡಿಗುತ್ತು, ಶಾಸಕರು ಬಂಟ್ವಾಳ ವಿಧಾನಸಭಾ ಕ್ಷೇತ್ರ, ಅಧ್ಯಕ್ಷತೆ ಸರಪಾಡಿ ಅಶೋಕ ಶೆಟ್ಟಿ, ಜಿಲ್ಲಾ ಸಂಚಾಲಕರು ಕಲೆ ಸಾಂಸ್ಕøತಿಕ ಪ್ರಕೋಷ್ಟ ದ.ಕ ಜಿಲ್ಲೆ, ಮುಖ್ಯ ಅತಿಥಿಗಳು ದೇವಪ್ಪ ಪೂಜಾರಿ ಅಧ್ಯಕ್ಷರು ಬಾ.ಜ.ಪಾ ಬಂಟ್ವಾಳ ಮಂಡಲ, ಸತೀಶ್ ಶೆಟ್ಟಿ ಪಟ್ಲ ಸ್ಥಾಪಕರು ಯಕ್ಷದ್ರುವ ಪಟ್ಲ ಫೌಂಡೇಶನ್, ಅಮರೇಂದ್ರ ಕಾರ್ಮಿಕ ಅಧಿಕಾರಿಗಳು ಕಾರ್ಮಿಕ ಇಲಾಖೆ ದ.ಕ ಜಿಲ್ಲೆ.
ಅಸಂಘಟಿತ ಕಲಾವಿದರ ವರ್ಗಗಳು: ಯಕ್ಷಗಾನ, ನಾಟಕ, ಭರತನಾಟ್ಯ, ಕಿರುತೆರೆ, ಸಿನಿಮಾ, ಸಂಗೀತ, ಜಾನಪದ ನೃತ್ಯ, ದೈವ ನರ್ತನ, ಸ್ಯಾಕ್ಸೋಫೋನ್, ವಾಲಗ, ಚಿನ್ನಾರಿಮೇಳ, ಭಜನೆ ಹಾಗೂ ಸಾಂಸ್ಕøತಿಕ ಕಲೆ ಚಟುವಟಿಕೆ ಸಂಬಂಧಪಟ್ಟ ಕಲಾವಿದರುಗಳು ಮತ್ತು ಸಹಾಯಕರು ಮುಂತಾದವರು ಭಾಗವಹಿಸಬಹುದು.
ನೋಂದಾವಣೆಯ ಪ್ರಯೋಜನೆಗಳು: ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ಅನುಕೂಲ. ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಲಾವಿದರಿಗೆ ವಿಶೇಷ ಸೌಲಭ್ಯಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಾಯಕ. ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಪ್ರಯೋಜನ ಪಡೆಯಬಹುದು.(ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2 ಲಕ್ಷ ಹಾಗೂ ಭಾಗಶ: ಅಂಗವೈಕಲ್ಯಕ್ಕೆ ರೂ. 1 ಲಕ್ಷ ಪರಿಹಾರ). ನೂತನ ಗೃಹ ರಚನೆ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ, ನಿವೃತಿ ನಂತರ ಪಿಂಚಣಿ ಯೋಜನೆ. ಸರಕಾರದಿಂದ ಬರುವ ಹೊಸ ಯೋಜನೆಗಳು, ಉಚಿತ ವೈದ್ಯಕೀಯ ಸೌಲಭ್ಯ(ಇ.ಎಸ್.ಐ). ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಪಿಂಚಣಿ ಯೋಜನೆ ರೂ. 3000/- ಇತ್ಯಾದಿ.
ನೋಂದಣಿಗೆ ಅರ್ಹತೆ: 16 ರಿಂದ 59 ವಯೋಮಾನದವರು. ಅದಾಯ ತೆರಿಗೆ ಪಾವತಿದಾರರಾಗಿರಬಾರದು. ಭವಿಷ್ಯ ನಿಧಿ ಹಾಗೂ ಇ.ಎಸ್.ಐ. ಫಲಾನುಭವಿಯಾಗಿರಬಾರದು.
ಅವಶ್ಯಕ ದಾಖಲೆಗಳು: ಆಧಾರ್ ಕಾರ್ಡ್, ಆಧಾರ್ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು
ನೋಂದಾಯಿತ ಕಲಾವಿದರು ಸ್ಥಳದಲ್ಲಿಯೇ ಗುರುತಿನ ಚೀಟಿಯನ್ನು ಪಡೆಯಬಹುದಾಗಿದ್ದು. ಇದು ದೇಶದಾದ್ಯಂತ ಹಾಗೂ ಜೀವತಾವಧಿಯ ಮಾನ್ಯತೆ ಹೊಂದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ; 9164800648, 8746967811