ಕನಕಮಜಲಿನಲ್ಲಿ ಬಿತ್ತೋತ್ಸವ ಮತ್ತು ವನಮಹೋತ್ಸವ ಆಚರಣೆ

ಶೇರ್ ಮಾಡಿ

ನೇಸರ ಜೂ.09: ಕರ್ನಾಟಕ ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಕನಕಮಜಲು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗೇರು ಮಾಣಿಮಜಲು, ಗ್ರಾಮ ಪಂಚಾಯಿತ್ ಕನಕಮಜಲು, ಜೆಸಿಐ ಸುಳ್ಯ ಸಿಟಿ ಮತ್ತು ಯುವಕ ಮಂಡಲ ಕನಕಮಜಲು ಇವರ ಸಹಯೋಗ ದೊಂದಿಗೆ ಗೋಗ್ರೀನ್ ಕಾರ್ಯಕ್ರಮದ ಪ್ರಯುಕ್ತ ಇಂದು ಕನಕಮಜಲಿನಲ್ಲಿ ಹಣ್ಣಿನ ಗಿಡ ನೆಡುವುದು ಮತ್ತು ಹಣ್ಣಿನ ಬೀಜ ಬಿತ್ತುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಕುತ್ಯಾಳ ಮತ್ತು ಗ್ರಾಮ ಪಂಚಾಯತ್ ಕನಕಮಜಲು ಇದರ ಅಭಿವೃದ್ಧಿ ಅಧಿಕಾರಿ ಸರೋಜಿನಿ ಗಿಡ ನೆಡುವ ಮುಖಾಂತರ ಉದ್ಘಾಟಿಸಿದರು.

ಉಪ ವಲಯ ಅರಣ್ಯ ಅಧಿಕಾರಿಗಳಾದ ಸಂಜಯ್ ನಾಯ್ಕ್ ರವರು ವನಮಹೋತ್ಸದ ಮಹತ್ವದ ಬಗ್ಗೆ ಮಾಹಿತಿ ನೀಡಿದರು ಜೇಸಿಐ ಸುಳ್ಯ ಸಿಟಿ ಅಧ್ಯಕ್ಷ ಯು ಪಿ ಬಶೀರ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗೇರು ಮಾಣಿಮಜಲು ಇದರ ಮುಖ್ಯೋಪಾಧ್ಯಾಯರಾದ ಗೀತಾ ಕುಮಾರಿ.ಎ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವೆಂಕಪ್ಪ ನಾಯ್ಕ್, ಯುವಕ ಮಂಡಲ ಕನಕಮಜಲು ಅಧ್ಯಕ್ಷರಾದ ಬಾಲಚಂದ್ರ ನೇಡಿಲು ಮತ್ತು ಯುವಕ ಮಂಡಲ ಕನಕಮಜಲು,ಎಸ್.ಡಿ.ಎಂ.ಸಿ, ಗ್ರಾಮ ಅರಣ್ಯ ಸಮಿತಿ ಇದರ ಸದಸ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು, ಕಿರಿಯ ಪ್ರಾಥಮಿಕ ಶಾಲೆ ಮಾಣಿಮಜಲು ವಿದ್ಯಾರ್ಥಿಗಳು ಹಾಗೂ ಊರಿನ ಸಾರ್ವಜನಿಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಕನಕಮಜಲು ಸ್ವಾಗತಿಸಿ ವಂದಿಸಿದರು.

ಜಾಹೀರಾತು

Leave a Reply

error: Content is protected !!