ಗುಂಡ್ಯ : ಚಲಿಸುತ್ತಿದ್ದ ಬಸ್ ಮೇಲೆಯೇ ಬಿದ್ದ ಮರ : ಅಪಾಯದಿಂದ ಪಾರಾದ ಪ್ರಯಾಣಿಕರು!

ಶೇರ್ ಮಾಡಿ

ನೇಸರ ಜೂ.12: ಸುಬ್ರಹ್ಮಣ್ಯ ಗುಂಡ್ಯ ರಸ್ತೆಯ ಅನಿಲ ಎಂಬಲ್ಲಿ ಚಲಿಸುತ್ತಿದ್ದ ಬಸ್ ಮೇಲೆಯೇ ರಸ್ತೆ ಬದಿಯ ಮರವೊಂದು ಮುರಿದು ಬಿದ್ದ ಘಟನೆ ಜೂ.12 ರಂದು ನಡೆದಿದೆ.
ಸುಬ್ರಹ್ಮಣ್ಯ ದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕ.ರಾ.ಸಾ.ಸಂ. ಬಸ್ ನ ಮೇಲೆ ಮರ ಬಿದ್ದಿದ್ದು ಅದೃಷ್ಟವಶಾತ್ ಪ್ರಯಾಣಿಕರು ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಈಗಾಗಲೇ ವಿಪರಿತ ಮಳೆಯೂ ಸುರಿಯುತ್ತಿದ್ದು ಈ ಮಳೆಗೆ ಅಪಾಯಕಾರಿಯಾಗಿ ರುವ ಮರಗಳು ಉರುಳಿದೆ ಎಂದು ಹೇಳಲಾಗುತ್ತಿದೆ.
ಅರಣ್ಯ ಇಲಾಖೆಯ ಬೇಜವಾಬ್ದಾರಿ:
ಆಗಾಗ ರಸ್ತೆ ಬದಿಯ ಮರಗಳು ಈ ರಸ್ತೆಯಲ್ಲಿ ಬೀಳುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಇನ್ನೂ ಎಚ್ಚೆತ್ತುಕೊಳ್ಳಲಿಲ್ಲ, ಈಗಾಗಲೇ ಅಪಾಯಕಾರಿ ಮರಗಳೆಂದು ಗುರುತಿಸಿದ್ದರೂ ಅಂತಹ ಮರಗಳನ್ನು ತೆರವುಗೊಳಿಸಲು ಕಾನೂನಿನ ಕುಂಟು ನೆಪ ಹೇಳುತ್ತಿರುವ ಅರಣ್ಯ ಇಲಾಖಾ ಅಧಿಕಾರಿ ಗಳು ಅಪಾಯ ಸಂಭವಿಸಿದಾಗ ಸ್ಥಳಕ್ಕೆ ಭೇಟಿ ನೀಡುವ ಕೆಲಸ ಮಾತ್ರ ಮಾಡುತ್ತಾರೆ. ಇನ್ನಾದರೂ ರಸ್ತೆ ಬದಿಯ ಮರ ತೆರವುಗೊಳಿಸುವಲ್ಲಿ ಅರಣ್ಯ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಾಹೀರಾತು

Leave a Reply

error: Content is protected !!