ಪಟ್ರಮೆ : ಗುಡ್ಡ ಜರಿದು ಎರಡು ದಿನವಾದರೂ ಸರಿಗೊಳ್ಳದ ಸಂಪರ್ಕರಸ್ತೆ: ಪಂಚಾಯತ್ ನ ದಿವ್ಯ ನಿರ್ಲಕ್ಷಕ್ಕೆ ಸ್ಥಳೀಯರ ಆಕ್ರೋಶ

ಶೇರ್ ಮಾಡಿ

ನೇಸರ ಜೂ.14: ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರೋ ಪಚ್ಚೆ ಮೈಪಾಲ ರಸ್ತೆಯ ಎಲಿಕಳ ಎಂಬಲ್ಲಿ ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ಗುಡ್ಡ ಜರಿದು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರ ಇಲ್ಲಾಂತಾಗಿದೆ.

ಘಟನೆ ನಡೆದು ಎರಡು ದಿನವಾದರೂ ಸ್ಥಳೀಯ ಪಂಚಾಯತ್ ಎಚ್ಚೆತ್ತುಕೊಂಡಿಲ್ಲ ಎಂದು ಸ್ಥಳೀಯ ಜನತೆ ಆಕ್ರೋಶಗೊಂಡಿದ್ದಾರೆ.
ಗುಡ್ಡ ಜರೆದಿರುವ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೆ ದೂರವಾಣಿ ಹಾಗೂ ಮೌಖಿಕವಾಗಿ ಮಾಹಿತಿ ನೀಡಿದರೂ ಮಂಗಳವಾರ ರಾತ್ರಿಯವರೆಗೂ ರಸ್ತೆಯ ಮೇಲಿನ ಮಣ್ಣನ್ನು ತೆರವುಗೊಳಿಸದೆ ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾಂಟ್ರಾಕ್ಟ್ ದಾರನಿಗೆ ಕರೆಮಾಡಿದಾಗ ಇದಕ್ಕೆ ಜೆಸಿಬಿ ಅಗತ್ಯವಿಲ್ಲ ಕೈಯಲ್ಲಿ ತೆಗೆಯಬಹುದು ಎಂದು ಉತ್ತರಿಸಿದ್ದಾರೆ ಎಂಬುದಾಗಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ತಕ್ಷಣವೇ ಸರಿಪಡಿಸಲು ಜೆಸಿಬಿ ಸಿಗುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳಿಗೆ ಉತ್ತರಿಸಿದ್ದಾರೆ.

ಈ ಪ್ರದೇಶದ 100 ಮೀಟರ್ ಅಂತರದಲ್ಲಿ ಮತ್ತಷ್ಟು ಗುಡ್ಡ ಜರಿಯುವ ಭೀತಿಯಿದ್ದು, ಮುಂದಿನ ಮಳೆಗೆ ಬೀಳುವ ಎಲ್ಲಾ ಸೂಚನೆಯಿದೆ. ಆದರೂ ಸ್ಥಳೀಯ ಪಂಚಾಯತ್ ಮೌನ ವಹಿಸಿದ ಬಗ್ಗೆ ಗ್ರಾಮಸ್ಥರಲ್ಲಿ ಆಕ್ರೋಶ ಉಂಟಾಗಿದೆ. ಪಂಚಾಯತ್ ನ ಆಮೆಗತಿಯ ಕಾರ್ಯಕ್ಕೆ ವ್ಯಾಪಕ ಅಸಮಾಧಾನ ಉಂಟಾಗಿದೆ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!