ಸಾರ್ವಜನಿಕ ಚುನಾವಣೆಗಳ ಮಾದರಿಯಲ್ಲಿ ಬ್ಯಾಲೆಟ್ ಪೇಪರ್ ಹಾಗೂ ಇಟಿಎಂ ಯಂತ್ರದ ಮೂಲಕ ಮತದಾನ
ನೇಸರ ಜೂ.16: ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ ಸಂವಿಧಾನ ಬದ್ಧ ವಿಧಿಗಳನ್ನು ಪರಿಚಯಿಸುವ ಪರಿಕಲ್ಪನೆ, ಭವಿಷ್ಯದ ಮತದಾರರಾದ ಮಕ್ಕಳಲ್ಲಿ ನ್ಯಾಯಯುತ ಮತದಾನವನ್ನು ಮಾಡುವ ಪರಿಪೂರ್ಣ ಶಿಕ್ಷಣ ನೀಡುವ, ಮತದಾನದ ಮಹತ್ವದ ಜವಾಬ್ದಾರಿಯನ್ನು ಪರಿಚಯಿಸುವ, ಸಾಮಾಜಿಕ ಅರಿವು ನೀಡುವ ಕಾರ್ಯಕ್ರಮವಾಗಿ ಶಾಲಾ ಪಾರ್ಲಿಮೆಂಟ್ ಚುನಾವಣೆಯನ್ನು ಜೂ.16ರ ಬುಧವಾರದಂದು ನಡೆಸಲಾಯಿತು.
ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆದ ಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮಂತ್ರಿಮಂಡಲದ ಕಲ್ಪನೆ ಮೂಡಿಸಲು ತರಗತಿ ಮಂತ್ರಿಮಂಡಲ ಹಾಗೂ ಶಾಲಾ ಮಂತ್ರಿಮಂಡಲದ ಚುನಾವಣೆ ನಡೆಯಿತು. ಚುನಾವಣೆಗಳನ್ನು ಸಾರ್ವಜನಿಕ ಚುನಾವಣೆಗಳ ಮಾದರಿಯಲ್ಲಿ ಬ್ಯಾಲೆಟ್ ಪೇಪರ್ ಹಾಗೂ ಇಟಿಎಂ ಯಂತ್ರದ ಮೂಲಕ ಮತದಾನ ಮಾಡುವುದರೊಂದಿಗೆ ನಡೆಸಿದ್ದು ವಿಶೇಷವಾಗಿತ್ತು. ಶಾಲಾ ಪ್ರಾಂಶುಪಾಲ ತೋಮಸ್ ಬಿಜಿಲಿ OIC ಯವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಉಪ ಪ್ರಾಂಶುಪಾಲ ಜೋಸ್ ಎಂ. ಜೆ., ಶಿಕ್ಷಕರಾದ ಜೆಸಿಂತಾ, ಅಪೋಲಿನ್, ಪೂರ್ಣಿಮಾ ಹರೀಶ್, ತ್ರೆಸ್ಸಿಯಮ್ಮ ನವರು ಎಲೆಕ್ಷನ್ ನಡೆಸಿಕೊಟ್ಟರು.
ಫಲಿತಾಂಶ:
ಪ್ರಧಾನ ಮಂತ್ರಿಯಾಗಿ ರಾಯಲ್ ಬಿನ್ನಿ, ಗೃಹಮಂತ್ರಿಯಾಗಿ ಜೀನಾ ಎ.ಕೆ, ವಿದ್ಯಾಮಂತ್ರಿಯಾಗಿ ಸೋನಾ ಫ್ರಾನ್ಸಿಸ್, ಸಂಪರ್ಕ ಮಂತ್ರಿಯಾಗಿ ಶ್ರೇಯ.ಕೆ, ಸಾಂಸ್ಕೃತಿಕ ಮಂತ್ರಿಯಾಗಿ ಆಂಜೆಲ್, ನೀರಾವರಿ ಮಂತ್ರಿಯಾಗಿ ಅಜೀಶ್, ಸಂಸದೀಯ ವ್ಯವಹಾರ ಮಂತ್ರಿಯಾಗಿ ಆರೋನ್, ಕ್ರೀಡಾ ಮಂತ್ರಿಯಾಗಿ ಪ್ರಜ್ವಲ್, ಅರೋಗ್ಯ ಮಂತ್ರಿಯಾಗಿ ಬೆರ್ಯಾಲ್ ಆಯ್ಕೆಯದರು.
ಜಾಹೀರಾತು